ವಿಜಯಸಾಕ್ಷಿ ಸುದ್ದಿ, ಗದಗ: ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ, ಶ್ರೀ ಗುರು ಪುಟ್ಟರಾಜ ಸಂಗೀತ ಶಿಕ್ಷಣ ಸಮಿತಿ ಯಳವತ್ತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಪರಮಪೂಜ್ಯ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಸೆ.14ರಂದು ಸಂಜೆ 7 ಗಂಟೆಗೆ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದ ಶ್ರೀ ಕೋಟೆ ಆವರಣದಲ್ಲಿ ಜರುಗುವುದು.
ಕಾರ್ಯಕ್ರಮದಲ್ಲಿ ಶಿರಹಟ್ಟಿ ಬಾಳೆಹೊಸೂರು ಭಾವೈಕ್ಯತಾ ಸಂಸ್ಥಾನ ಪೀಠದ ಪೂಜ್ಯಶ್ರೀ ಜ. ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯ ವಹಿಸುವರು. ಉದ್ಘಾಟಕರಾಗಿ ನೀಲಗುಂದ ಶ್ರೀ ಗುದ್ನೇಶ್ವರ ಮಠದ ಪೂಜ್ಯಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಆಗಮಿಸುವರು. ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳು ಹಾಗೂ ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಂಗಮಾಭಿವೃದ್ಧಿ ಸಂಘ ಕೊಪ್ಪಳದ ರಾಜ್ಯಾಧ್ಯಕ್ಷ ಷಡಕ್ಷರಯ್ಯ ನವಲಿಹಿರೇಮಠ, ಯಳವತ್ತಿಯ ಸಿದ್ದಲಿಂಗಯ್ಯಸ್ವಾಮಿ ಹಿರೇಮಠ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಜ್ಯೋತಿ ವಿನಾಯಕ ಪಾಟೀಲ, ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಯಳವತ್ತಿ ಗ್ರಾ.ಪಂ ಅಧ್ಯಕ್ಷೆ ರೇಷ್ಮಾಬಾನು ಹಳೆಮನೆ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕ ಎಸ್.ಎಚ್. ಶಿವನಗೌಡರ, ದತ್ತಾ ಡೆವಲಪರ್ಸ್‌ನ ನಿರ್ದೇಶಕ ಕಿರಣ ಭೂಮಾ, ಗಣ್ಯ ವ್ಯಾಪಾರಸ್ಥರಾದ ಸದಾಶಿವಸ್ವಾಮಿ ಮದರಿಮಠ, ಪಂಚಾಕ್ಷರಿ ಹಿಡ್ಕಿಮಠ, ಅ.ಭಾ.ವೀ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಲಿಂಗರಾಜ ಗುಡಿಮನಿ, ಮರೋಳದ ಮುದುಕಯ್ಯಸ್ವಾಮಿ ಹಿರೇಮಠ, ಗದುಗಿನ ಸಿದ್ದಲಿಂಗೇಶ ಮೂರಶಿಳ್ಳಿನ, ಸಮಾಜಸೇವಕರಾದ ಉಮೇಶ ಹಡಪದ ಮುಂತಾದವರು ಭಾಗವಹಿಸುವರು.
ನಂತರ ಸನ್ಮಾನಿತರಿಂದ ಸ್ವರ ಸಂಗೀತ ನಮನ ಕಾರ್ಯಕ್ರಮ ಜರುಗಲಿದೆ. ಪಕ್ಕವಾದ್ಯ ಕಲಾವಿದರಾದ ಸಂಗಮೇಶ ಪಾಟೀಲ, ಗುಲ್ಬರ್ಗಾದ ಬಸವರಾಜ ಹೊನ್ನಿಗನೂರ, ಮಲ್ಲಿಕಾರ್ಜುನ ತುರುವನೂರು ಚಿತ್ರದುರ್ಗ ಅವರು ಪಕ್ಕವಾದ್ಯ ಕಲಾವಿದರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಲ್ಲೂರಿನ ದೊಡ್ಡಯ್ಯ ಗವಾಯಿಗಳು, ತುರುವನೂರಿನ ಮಲ್ಲಿಕಾರ್ಜುನ ಗವಾಯಿಗಳು, ಕೂಟನೂರಿನ ಮಹಾಂತಯ್ಯ ಶಾಸ್ತ್ರಿಗಳು ಹಿರೇಮಠ, ರಾವಣಕಿಯ ಚೆನ್ನಯ್ಯ ಗವಾಯಿಗಳು, ಕಾರಟಗಿ ಮದರಿಯ ರಾಚಯ್ಯಸ್ವಾಮಿ ಹಿರೇಮಠ, ಕೋಟುಮಚಗಿಯ ರಾಮಣ್ಣ ಭಜಂತ್ರಿ, ಕಲ್ಲೂರಿನ ಮಹಾಂತಯ್ಯ ಗವಾಯಿಗಳು, ಕಲ್ಲಯ್ಯಶಾಸ್ತ್ರಿಗಳು, ಹಾನಗಲ್ಲಿನ ವೆಂಕಟೇಶ ಗವಾಯಿಗಳು ಹಾಗೂ ದುದನ್ಯ್ ಸಿದ್ಧಯ್ಯಶಾಸ್ತ್ರಿಗಳು ಸಹಕಾರ ನೀಡಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಮಹಾದಾಸೋಹ ಜರುಗುವುದು ಎಂದು ಸಮಿತಿಯ ಕಾರ್ಯದರ್ಶಿ ಬೆಟದಯ್ಯ ಶಾಸ್ತ್ರಿಗಳು ಹಿರೇಮ್ಯಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿಯೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿಗ್ಗಜರಿಗೆ ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಲಿಂ. ರಾಜಶೇಖರಯ್ಯನವರು ಹಾಗೂ ಲಿಂ. ಮಾತೋಶ್ರೀ ನೀಲಾಂಬಿಕಾ ನವಲಿಹಿರೇಮಠ-ಕೊಪ್ಪಳ ಇವರ ಸ್ಮರಣಾರ್ಥ ಪಂ. ಸದಾಶಿವ ಪಾಟೀಲ-ಕೊಪ್ಪಳ ಅವರಿಗೆ, ಬಿ. ಶ್ರೀರಾಮುಲು ಅವರ ಮಾತೋಶ್ರೀ ದಿ. ಹೊನ್ನೂರಮ್ಮ ಇವರ ಸ್ಮರಣಾರ್ಥ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಂ. ವೀರೇಶ ಕಿತ್ತೂರು ಅವರಿಗೆ ಹಾಗೂ ಪಂ. ಲಿಂ. ಚೆನ್ನವೀರ ಶಾಸ್ತ್ರಿಗಳು ಹಿಡ್ಕಿಮಠ ಅವರ ಸ್ಮರಣಾರ್ಥ ಬೆಂಗಳೂರಿನ ಪಂ. ನಾಗಲಿಂಗಯ್ಯ ಗವಾಯಿಗಳು ಅವರಿಗೆ ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರದಾನ ಮಾಡಲಾಗುವುದು.



