ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಇಂದು

0
ganji
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಗಂಜಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮೇ.9ರಂದು ಬೆಳಿಗ್ಗೆ 8 ಗಂಟೆಗೆ ಗದಗದ ಹೊಂಬಳ ರಸ್ತೆಯ ಉಮಚಗಿ (ವಡಗೇರಿ) ಇವರ ಹೊಲದಲ್ಲಿ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಜರುಗಲಿದೆ.

Advertisement

ಪ್ರಥಮ ಬಹುಮಾನ 10 ಗ್ರಾಂ ಬಂಗಾರ, ದ್ವಿತೀಯ ಬಹುಮಾನ 5 ಗ್ರಾಂ ಬಂಗಾರ, ತೃತೀಯ ಬಹುಮಾನ 2.5 ಗ್ರಾಂ ಬಂಗಾರ, ನಾಲ್ಕನೇ ಬಹುಮಾನ ರೂ.15001 ಹಾಗೂ 5ನೇ ಬಹುಮಾನ ರೂ.10001 ಪ್ರದಾನ ಮಾಡಲಾಗುವುದು. ಬೆಳಿಗ್ಗೆ 8ರಿಂದ 1 ಗಂಟೆಯವರೆಗೆ 2 ಸಾವಿರ ರೂ, ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ 2500 ರೂ, ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ 3 ಸಾವಿರ ರೂ ಪ್ರವೇಶ ಶುಲ್ಕವಿರುತ್ತದೆ. ಸ್ಪರ್ಧೆಯ ನಿರ್ಣಯಗಳು ಪಂಚರ ಮೂಲಕವೇ ನಿರ್ಧಾರಗೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ-9972485302,9663570842, 9901350410, 9740272750, 9980367552 ಸಂಪರ್ಕಿಸಬೇಕೆಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.


Spread the love

LEAVE A REPLY

Please enter your comment!
Please enter your name here