ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುತ್ತಿರುವ ಪುಲಿಗೆರೆ ಉತ್ಸವದ 3ನೇ ದಿನವಾದ ಏ.21ರಂದು ಉದಯರಾಗ-3ರಲ್ಲಿ ಬೆಳಿಗ್ಗೆ 6 ಗಂಟೆಗೆ ಹುಬ್ಬಳ್ಳಿಯ ಶಶಿಕಲಾ ದಾನಿ ಅವರಿಂದ ಜಲತರಂಗ ಸಂಗೀತ ವಿಶೇಷ ಕಾರ್ಯಕ್ರಮ, 7 ಗಂಟೆಗೆ ಶಿರಹಟ್ಟಿಯ ಶೃತಿ ರೊಟ್ಟಿ ಜೋಶಿ ಅವರಿಂದ ಹಿಂದೂಸ್ಥಾನಿ ಗಾಯನ ನೆರವೇರಲಿದೆ.
Advertisement
ಸಂಜೆ 6 ಗಂಟೆಗೆ ಬೆಂಗಳೂರಿನ ಡಾ.ರವೀಂದ್ರ ಗುರುರಾಜ ಕಾಟೋಟಿ ಅವರಿಂದ ಹಾರ್ಮೋನಿಯಂ ಸೋಲೋ ಪ್ರದರ್ಶನ ನೆರವೇರಲಿದೆ. ಸಂಜೆ 7.30ಕ್ಕೆ ಬೆಂಗಳೂರಿನ ಅರ್ಚನಾ ಮತ್ತು ಚೇತನಾ ಅವರಿಂದ ಭರತನಾಟ್ಯ ನಡೆಯಲಿದ್ದು, ಸಂಜೆ 8.30ಕ್ಕೆ ಬೆಂಗಳೂರಿನ ಅನುಶ್ರೀ ಪದ್ಮನಾಮ ಅವರಿಂದ ಓಡಿಸ್ಸಿ ನೃತ್ಯ ಪ್ರದರ್ಶನದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.