ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ರಿಲೀಸ್ ಗೆ ಕೊನೆಗೂ ಡೇಟ್ ಫಿಕ್ಸ್ ಆಗಿದೆ. 2026ರ ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರಲಿದೆ.
Advertisement
ಅಂತೂ ಇಂತೂ ಯಶ್ ಅಭಿಮಾನಿಗಳಿಗೆ ಖುಷಿ ಪಡಲು ಸುದ್ದಿಯೊಂದು ಸಿಕ್ಕಂತಾಗಿದೆ. ಸುದೀರ್ಘ ಕಾಯುವಿಕೆ ಬಳಿಕ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ.
ಈ ಮೊದಲು ಇದೇ ಏ.10 ಕ್ಕೆ ರಿಲೀಸ್ ಡೇಟ್‌ನ್ನು ಯಶ್ ಘೋಷಿಸಿದ್ದರು. ಫಸ್ಟ್ ಲುಕ್ ಟೀಸರ್‌ನಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರು. ಆದರೆ, ಟಾಕ್ಸಿಕ್ ವೀಕ್ಷಿಸಲು ಇನ್ನೊಂದು ವರ್ಷ ಕಾಯಬೇಕು.
ಏಕಕಾಲದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯ ಟಾಕ್ಸಿಕ್ ತಯಾರಾಗುತ್ತಿದ್ದು, ಬೇರೆ ಬೇರೆ ಭಾಷೆಗಳಲ್ಲೂ ಬರ್ತಿದೆ.