ಬೆಂಗಳೂರು: ಕುಡಿದ ಮತ್ತಿನಲ್ಲಿ ರೈಲಿನ ಚೈನ್ ಎಳೆದ ವಿಚಾರ ಪ್ರಶ್ನಿಸಿದ ಆರ್‌ಪಿಎಫ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಮೂವರು ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ ಗೋವಾಗೆ ಹೊರಟಿದ್ದ ಯಶವಂತಪುರ–ವಾಸ್ಕೋಡಗಾಮ ರೈಲಿನಲ್ಲಿ ಈ ಘಟನೆ ನಡೆದಿದ್ದು, ಚೈನ್ ಎಳೆದಿರುವುದನ್ನು ಗಮನಿಸಿದ ಆರ್‌ಪಿಎಫ್ ಸಿಬ್ಬಂದಿ ಪ್ರಶ್ನಿಸಿದಾಗ ಆರೋಪಿಗಳು ತಳ್ಳಾಟ ಹಾಗೂ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣವೇ ಹೆಚ್ಚಿನ ಆರ್‌ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೂವರನ್ನೂ ಹಿಡಿದಿದ್ದಾರೆ.
ಯಶವಂತಪುರ ರೈಲ್ವೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ರೈಲಿನ ಸಂಚಾರ ಕೆಲಕಾಲ ವಿಳಂಬವಾಗಿದೆ.



