ವಿಜಯಸಾಕ್ಷಿ ಸುದ್ದಿ, ಗದಗ: ಗದಗಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಶ್ರೀ ಸ್ವಾಮಿ ವಿವೇಕಾನಂದರ 164ನೇ ಜಯಂತಿ ಕಾರ್ಯಕ್ರಮದಲ್ಲಿ ಗದಗ ಮಾಜಿ ಶಾಸಕರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬಿಜಾಪೂರ ರಾಮಕೃಷ್ಣ ಆಶ್ರಮದ ಪೂಜ್ಯ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರು ಡಿ.ಆರ್. ಪಾಟೀಲರಿಗೆ ಶಾಲು ಹೊದೆಸಿ ಫಲಪುಷ್ಪ ನೀಡಿ ಆಶೀರ್ವದಿಸಿದರು.
ಸರಳ, ಸಜ್ಜನಿಕೆ ಹಾಗೂ ಸಂತ ರಾಜಕಾರಣಿ ಎಂದೇ ಜನಮನದಲ್ಲಿ ನೆಲೆಸಿರುವ ಡಿ.ಆರ್. ಪಾಟೀಲ ಅವರು ಸಮಾಜಮುಖಿ, ಜನಮುಖಿಯಾಗಿ ಕಾರ್ಯ ಮಾಡಿದವರು. ಧಾರ್ಮಿಕ ಮನೋಭಾವದ ಅವರು ನಮ್ಮ ಈ ಆಶ್ರಮ ಸುಂದರವಾಗಿ ರೂಪುಗೊಳ್ಳುವಲ್ಲಿ ಕೊಡುಗೆ ನೀಡಿದ್ದಾರೆ. ಆಶ್ರಮದ ಸಕಲ ಸದ್ಭಕ್ತರ ಪರವಾಗಿ ಸನ್ಮಾನಿಸಲು ಅತೀವ ಸಂತೋಷ ಎನ್ನಿಸುವುದು ಎಂದು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಬಣ್ಣಿಸಿದರು.
ಪೂಜ್ಯ ಸ್ವಾಮಿ ಜಗನ್ನಾಥಾನಂದಜೀ, ಪೂಜ್ಯ ಸ್ವಾಮಿ ಸುಮೇದಾನಂದಜೀ ಹಾಗೂ ಪೂಜ್ಯ ಸ್ವಾಮಿ ಶಿವಪ್ರಿಯಾನಂದ ಜೀ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗಣ್ಯರು, ಆಶ್ರಮದ ಎಲ್ಲ ಸೇವಾ ಸಮಿತಿಯ ಸದ್ಭಕ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



