ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಅವಳಿ ನಗರದ ಭಾವೈಕ್ಯತೆಯ ಮಠವಾದ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಪ್ರತಿ ವರ್ಷವೂ ಜಾತಿ-ಮತ-ಬೇಧವೆನ್ನದೆ ಎಲ್ಲಾ ಧರ್ಮದವರನ್ನು ಒಳಗೊಂಡಂತೆ ಪದಾಧಿಕಾರಿಗಳನ್ನು ನೇಮಕ ಮಾಡಿ ಜಾತ್ರೆ ನೆರವೇರಿಸುತ್ತಿರುವುದು ಭಾವೈಕ್ಯತೆಯ ಮಠ ಎಂಬ ಬಿರುದಿಗೆ ಪಾತ್ರವಾಗಿದೆ. ಅದರಂತೆ ಈ ವರ್ಷವೂ ಕೂಡ ಸಂಪ್ರದಾಯದಂತೆ ಎಸ್.ಎಸ್. ಕಳಸಾಪುರ ಅವರ ಮನೆಯಿಂದ ಜಾತ್ರಾ ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಜುಮ್ಮಾ ಮಸ್ಜಿದ್ ಕಮಿಟಿಯ ವತಿಯಿಂದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳನ್ನು ಸನ್ಮಾನಿಸಲಾಯಿತು.
Advertisement
ಈ ಸಂರ್ಭದಲ್ಲಿ ಜಾಮಿಯಾ ಮಸ್ಜಿದ್ ಕಮಿಟಿಯ ಅಕ್ಬರ್‌ಸಾಬ ಬಬರ್ಚಿ, ಹಾಜಿ ಮಕಬೂಲ್‌ಸಾಬ್ ಶಿರಹಟ್ಟಿ, ಮಹಮ್ಮದ್‌ಶಫಿ ಕುದರಿ, ಹಾಜಿ ಧಾರವಾಡ, ರಿಯಾಜ್ ಬ್ಯಾಳಿರೊಟ್ಟಿ, ಇನ್ನೂ ಹಲವಾರು ಮುಸ್ಲಿಂ ಸಮಾಜದ ಗಣ್ಯರು ಉಪಸ್ಥಿರಿದ್ದರು.