ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಲಕ್ಕುಂಡಿ ಗ್ರಾಮದ ಸಾರ್ವಜನಿಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇಲ್ಲಿಯ ಗ್ರಾ.ಪಂ ಸದಸ್ಯ ರುದ್ರಪ್ಪ ಮುಸ್ಕಿನಭಾವಿ ಅವರ ನೇತೃತ್ವದಲ್ಲಿ ಗದಗ ಗ್ರಾಮೀಣ ಠಾಣಿಯ ಸಬ್‌ಇನ್ಸ್ಪೆಕ್ಟರ್ ಎಲ್.ಕೆ. ಜೂಲಿಕಟ್ಟಿ, ಹವಾಲ್ದಾರರಾದ ಬಸವರಾಜ ಗುಡ್ಲಾನೂರ, ಆನಂದಸಿಂಗ್ ದೊಡ್ಡಮನಿ, ಪೊಲೀಸ್ ಪೇದೆ ಪ್ರವೀಣ ಕಲ್ಲೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸಪ್ಪ ರೇವಡಿ, ಹಾಲ್ಲಪ್ಪ ಮುಸ್ಕಿನಭಾವಿ, ಗವಿಶಿದ್ದಪ್ಪ ರೇವಡಿ, ಸಣ್ಣೀರಪ್ಪ ಮುಸ್ಕಿನಭಾವಿ, ವೀರಯ್ಯ ಗಂಧದ, ಮಹೇಶ ಮುಸ್ಕಿನಭಾವಿ, ಮಹಾದೇವಪ್ಪ ಕವಲೂರು, ಮಹಮ್ಮದರಫೀಕ್ ಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು.



