HomeWorld Newsಟ್ರಂಪ್ ಯೂ-ಟರ್ನ್: ಚೀನಾವನ್ನು ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ!

ಟ್ರಂಪ್ ಯೂ-ಟರ್ನ್: ಚೀನಾವನ್ನು ಹಾಡಿ ಹೊಗಳಿದ ಅಮೆರಿಕ ಅಧ್ಯಕ್ಷ!

For Dai;y Updates Join Our whatsapp Group

Spread the love

ಬೀಜಿಂಗ್: ಅಮೆರಿಕ–ಚೀನಾ ಸಂಬಂಧಗಳಲ್ಲಿ ಹೊಸ ತಿರುವು ಕಂಡುಬಂದಿದ್ದು, ಬಹಿರಂಗವಾಗಿ ಚೀನಾವನ್ನು ಟೀಕಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಬೀಜಿಂಗ್‌ನಲ್ಲಿ ನಡೆದ ಜಿ-2 (G2) ಶೃಂಗಸಭೆಯಲ್ಲಿ ಚೀನಾವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.

ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ಪೀಪಲ್‌ನಲ್ಲಿ ನಡೆದ ಐತಿಹಾಸಿಕ ಸಭೆಯ ಆರಂಭಿಕ ಮಾತುಕತೆಯಲ್ಲಿ ಮಾತನಾಡಿದ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು “ಶ್ರೇಷ್ಠ ನಾಯಕ” ಎಂದು ಬಣ್ಣಿಸಿದ್ದಾರೆ. “ನಿಮ್ಮೊಂದಿಗೆ ಇರುವುದು ಹಾಗೂ ನಿಮ್ಮ ಸ್ನೇಹಿತನಾಗಿರುವುದು ನನಗೆ ಹೆಮ್ಮೆ. ಅಮೆರಿಕ–ಚೀನಾ ಸಂಬಂಧಗಳು ಹಿಂದೆಂದಿಗಿಂತ ಉತ್ತಮವಾಗಲಿದೆ” ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ತಮ್ಮ ಭಾಷಣದಲ್ಲಿ ಜಿನ್‌ಪಿಂಗ್ ಅವರ ನಾಯಕತ್ವವನ್ನು ಶ್ಲಾಘಿಸಿದ ಟ್ರಂಪ್, “ನಾನು ಸದಾ ಸತ್ಯವನ್ನೇ ಹೇಳುತ್ತೇನೆ. ಕೆಲವರಿಗೆ ಇದು ಇಷ್ಟವಾಗದೇ ಇರಬಹುದು, ಆದರೆ ಕ್ಸಿ ಜಿನ್‌ಪಿಂಗ್ ಒಬ್ಬ ಶ್ರೇಷ್ಠ ನಾಯಕ” ಎಂದು ಹೇಳಿದ್ದಾರೆ.

ಸಭೆಗೆ ತನ್ನೊಂದಿಗೆ ಬಂದಿದ್ದ ಎಲಾನ್ ಮಸ್ಕ್, ಆಪಲ್ ಸಿಇಒ ಟಿಮ್ ಕುಕ್ ಮತ್ತು ಎನ್‌ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಸೇರಿದಂತೆ ಪ್ರಮುಖ ಉದ್ಯಮಿಗಳನ್ನು ಪರಿಚಯಿಸಿದ ಟ್ರಂಪ್, “ನಾನು ಜಗತ್ತಿನ ಅತ್ಯುತ್ತಮ ಉದ್ಯಮಿಗಳನ್ನು ಇಲ್ಲಿಗೆ ಕರೆತಂದಿದ್ದೇನೆ” ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಅಮೆರಿಕ ಮತ್ತು ಚೀನಾ ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರ ರಾಷ್ಟ್ರಗಳಾಗಿ ಮುಂದುವರಿಯಬೇಕು ಎಂದು ಕರೆ ನೀಡಿದರು. ಜಾಗತಿಕ ಸ್ಥಿರತೆ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಎರಡೂ ದೇಶಗಳ ಸಹಕಾರ ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.

ಸಭೆಯಲ್ಲಿ ವ್ಯಾಪಾರ ಸಂಬಂಧಗಳು, ಸುಂಕ ಸಮರ, ಹಾಗೂ ಮಾರುಕಟ್ಟೆ ತೆರೆಯುವಿಕೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!