ಬೆಂಗಳೂರು: ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ ಹಳ್ಳಿ ರೌಡಿಶೀಟರ್ ಸಮೀರ್, ಪಂಜಾಬ್ ನ ತೇಜ್ ಬಹದ್ದೂರ್ ಬಂಧಿತ ಆರೋಪಿಗಳಾಗಿದ್ದು,
Advertisement
ಕೆಲ ದಿನಗಳ ಹಿಂದೆ ಸಮೀರ್ ನನ್ನು ಬಂಧಿಸಿದ ಸಿಸಿಬಿ ಪೊಲೀಸರು ಇದೀಗ ವಿಚಾರಣೆ ಬಳಿಕ ತೇಜ್ ಬಹದ್ದೂರ್ ನನ್ನು ಬಂಧಿಸಿದ್ದಾರೆ. ಬಂಧಿತ ಸಮೀರ್ ನಿಂದ ಒಂದು ನಾಡಾ ಬಂದೂಕು, ಒಂದು ಪಿಸ್ತೂಲ್, ಎರಡು ಜೀವಂತ ಗುಂಡುಗಳು ವಶಕ್ಕೆ ಪಡೆಯಲಾಗಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ.