ಬೆಂಗಳೂರು: ಲೈಫ್ ಸೆಟಲ್ ಮಾಡಿಕೊಳ್ಳಲು ಕೋಟಿ ದೋಚಿದ್ದ ಖದೀಮರನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ ಮೂರ್ತಿ, ಅರುಣ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಹುಲಿಮಂಗಲದ ಎಲಿಗೆನ್ಸ್ ಅಪಾರ್ಟ್ ಮೆಂಟ್ ನಲ್ಲಿ ಸುನೀಲ್ ಕುಮಾರ್ ಎಂಬುವರ ಫ್ಲಾಟ್ ನಲ್ಲಿ 1.16 ಕೋಟಿ ಹಣ ಕದ್ದಿದ್ದರು.
ಹಳೆ ಪರಿಚಯದ ಮನೆಯನ್ನೇ ಟಾರ್ಗೆಟ್ ಮಾಡಿದ ಶ್ರೀನಿವಾಸ ಮೂರ್ತಿ ಮತ್ತು ಅರುಣ್ ಕುಮಾರ್ ಎಲೆಕ್ಟ್ರಿಷನ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಉದ್ಯಮಿಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕಿ, ಲೈಫ್ ಸೆಟಲ್ ಮಾಡಿಕೊಳ್ಳಲು ಕಳ್ಳತನಕ್ಕೆ ಪ್ಲಾನ್ ಮಾಡಿಕೊಂಡಿದ್ದು ತನಿಖೆಯಲ್ಲಿ ಬಹಿರಂಗವಾಗಿದೆ.
ಮದುವೆಗಾಗಿ ಕುಟುಂಬ ಸಮೇತ ಕೋಲಾರಿಗೆ ತೆರಳಿದ್ದ ಸುನೀಲ್ ಮನೆಯಲ್ಲಿ ಯಾರೂ ಇಲ್ಲದ ಸಮಯ ಬಳಸಿಕೊಂಡು, ಮನೆ ಬಾಗಿಲು ಮುರಿದು ಹಣ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಕೊನೆಗೂ ಬಂಧಿಸಿ, ಪೂರ್ಣ 1.16 ಕೋಟಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.



