ತುಮಕೂರು: ಕುಣಿಗಲ್‌ನಲ್ಲಿ ಪುಡಿರೌಡಿಗಳ ಅಟ್ಟಹಾಸ ಮಿತಿಮೀರಿದ್ದು, ಬಿಯರ್ ಹಣ ಕೇಳಿದ್ದಕ್ಕೆ ಲಾಂಗ್ ಬೀಸಿ ಬೆದರಿಕೆ ಹಾಕಿರುವ ಘಟನೆ ಕುಣಿಗಲ್ ತಾಲ್ಲೂಕಿನ ಸಂತೆಪೇಟೆಯ ಜೆಕೆ ಬಾರ್ ನಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಕೆಂಪನಹಳ್ಳಿಯ ಮಂಜುನಾಥ್(28),ನಿಟ್ಟೂರು ಮನೋಜ್@ಸಣ್ಣ(24) ಬಂಧಿತ ಪುಡಿರೌಡಿಳಾಗಿದ್ದು, ಬಿಯರ್ ಖರೀದಿಸಲು ಬಾರ್‌ಗೆ ಬಂದ ಈ ಇಬ್ಬರು ಯುವಕರು ಬಾರ್ ಕ್ಯಾಶಿಯರ್ ಗುರುಮೂರ್ತಿ ಮೇಲೆ ಲಾಂಗ್ ಬಳಸಿ ಬೆದರಿಕೆ ಹಾಕಿದ್ದಾರೆ.
ಅದಲ್ಲದೆ ತಮ್ಮ ಇಟಿಯೋಸ್ ಕಾರಿನಿಂದ ಲಾಂಗ್ ತಂದು ಕ್ಯಾಶ್ ಕೌಂಟರ್ ಮೇಲೆ ಬೀಸಿ ಅಟ್ಟಹಾಸ ನಡೆಸಿದ್ದು, ಇನ್ನೂ ಈ ಪುಡಿರೌಡಿಗಳ ಅಟ್ಟಹಾಸ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಕುಣಿಗಲ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



