ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ:ಲಕ್ಷೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಕಳ್ಳತನದ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ 1.80 ಲಕ್ಷ ರೂಗಳ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
ಆರೋಪಿಗಳು ಕಳೆದ ಡಿಸೆಂಬರ್ ತಿಂಗಳ 20 ಮತ್ತು ಜನವರಿ 23ರಂದು ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯರಿಂದ ಬಂಗಾರದ ನೆಕ್‌ಲೆಸ್ ಮತ್ತು ಬಂಗಾರದ ಚೈನು ಕಳ್ಳತನ ಮಾಡಿದ್ದರು. ದೂರು ದಾಖಲಾಗುತ್ತಿದ್ದಂತೆ ಪಟ್ಟಣದ ಪೊಲೀಸರು ಖಚಿತ ಮಾಹಿತಿಯೊಂದಿಗೆ ಜ.27ರಂದು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಆರೋಪಿಗಳನ್ನು ಹಿಡಿದು ವಿಚಾರಣೆ ಮಾಡಿ ಪ್ರಕರಣಗಳಲ್ಲಿ ಕಳ್ಳತನವಾದ ಬಂಗಾರದ ನೆಕ್‌ಲೆಸ್ ಮತ್ತು ಚೈನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮಹಾರಾಷ್ಟ್ರ ರಾಜ್ಯದವರಾಗಿದ್ದು, ಸಮೀರ ಶೇಖ ತಂದೆ ಅಮರ ಶೇಖ ಮತ್ತು ಅಧಿಕಾ ಕೋಂ ಅಶೋಕ ಕಾಳೆ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ ಆರೋಪಿತರ ಪತ್ತೆಗೆ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು. ಡಿ.ಎಸ್.ಪಿ, ಸಿಪಿಐ ನಾಗರಾಜ ಮಾಡಳ್ಳಿ, ಇವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ನಾಗರಾಜ ಗಡದ, ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ಹಾಗೂ ಎ.ಎಸ್.ಐ ಎನ್.ಎ. ಮೌಲ್ವಿ, ಸಿಬ್ಬಂದಿಗಳಾದ ಆರ್.ಎಸ್. ಯರಗಟ್ಟಿ, ಎಮ್.ಎ. ಶೇಖ, ಡಿ.ಎಸ್. ನದಾಫ್, ಎಚ್.ಐ. ಕಲ್ಲಣ್ಣವರ, ಪಾಂಡುರAಗರಾವ್, ಎ.ಆರ್. ಕಮ್ಮಾರ, ಎಮ್.ಎಸ್ ಬಳ್ಳಾರಿ, ಸಿ.ಎಸ್. ಮಠಪತಿ, ಗುರು ಬೂದಿಹಾಳ, ಸಂಜೀವ ಕೊರಡೂರ, ಮಧುಚಂದ್ರ ಧಾರವಾಡ, ಸೋಮು ವಾಲ್ಮೀಕಿ, ನಂದಯ್ಯ ಮಠಪತಿ ಯಶಸ್ವಿಯಾಗಿದ್ದಾರೆ.
ಸದರಿ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಎಸ್.ಪಿ, ಡಿ.ಎಸ್.ಪಿ ಅವರು ಅಭಿನಂದಿಸಿದ್ದಾರೆ.