ಕೊಡಗು: ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಕಣ್ಮರೆಯಾಗಿರುವ ಘಟನೆ ಕೊಡಗು ಜಿಲ್ಲೆಕುಶಾಲನಗರ ಸಮೀಪದ ಹಾರಂಗಿ ಹಿನ್ನೀರಿನಲ್ಲಿ ನಡೆದಿದೆ. ಚಂಗಪ್ಪ (17) ತರುಣ್ ತಿಮ್ಮಯ್ಯ (17) ನೀರಿನಲ್ಲಿ ಕಣ್ಮರೆಯಾದ ವಿದ್ಯಾರ್ಥಿಗಳಾಗಿದ್ದು,
Advertisement
ಮಡಿಕೇರಿಯ ಜೂನಿಯರ್ ಕಾಲೇಜು ಪಿಯು ವಿದ್ಯಾರ್ಥಿಗಳು ಎಂದು ತಿಲೀದು ಬಂದಿದೆ. ಈ ಘಟನೆ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಣ್ಮರೆಯಾದ ಇಬ್ಬರ ಹುಡುಕಾಟ ಕಾರ್ಯವನ್ನು ಅಗ್ನಿಶಾಮಕ ದಳ, ಪೊಲೀಸರು ಹಾಗೂ ದುಬಾರೆ ರ್ಯಾಫ್ಟಿಂಗ್ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.


