ಉಡುಪಿ: ಯಕ್ಷಗಾನ ವೇಷಧಾರಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮಂದಾರ್ತಿ ಮೇಳದ ಕಲಾವಿದ ಈಶ್ವರ ಗೌಡ ಮೃತ ದುರ್ಧೈವಿಯಾಗಿದ್ದು, ಈಶ್ವರ ಗೌಡ ಮಂದಾರ್ತಿ ಮೇಳದ ಕಲಾವಿದರಾಗಿದ್ದರು.
Advertisement
ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ರಾತ್ರಿ ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ದಾಖಲಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ.
ಈಶ್ವರ ಗೌಡ ಅವರು ತಮ್ಮ ಪಾತ್ರ ಮುಗಿಸಿ ಇಹಲೋಕ ತ್ಯಜಿಸಿದ್ದಾರೆ. ಮಂದಾರ್ತಿ ಮೇಳದಲ್ಲಿ ತಂದೆ ಕೂಡ ವೇಷಧಾರಿಯಾಗಿದ್ದರು. ಈಶ್ವರ ಗೌಡ ಅವರು ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಪಾತ್ರ ನಿರ್ವಹಿಸಿದ್ದರು.


