ಯು.ಜಿ.ಡಿ., ರಸ್ತೆ ನಿರ್ಮಿಸಲು ಸಚಿವರಿಗೆ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 6, 1ನೇ ಭಾಗ, ಸಿಟಿ ಸರ್ವೇ ನಂ. 6614ರಲ್ಲಿ ಯು.ಜಿ.ಡಿ. ಹಾಗೂ ರಸ್ತೆ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿ ವಿನಂತಿಸಿಕೊಂಡರು.

Advertisement

ಈ ಸಂಬಂಧ ಜನತಾ ದರ್ಶನದ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಜಾಗೆಯಲ್ಲಿ ಒಂದು ತರಹದ ಕೊಳಚೆ ಪ್ರದೇಶ ಜಾಗೆಯಾಗಿದ್ದು ಜಾಲಿಕಂಟಿ ಬಹಳ ಬೆಳೆದು ಹಂದಿ, ನಾಯಿಗಳು ವಾಸ ಮಾಡುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಇಲ್ಲಿ ಚರಂಡಿ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆಯಿಲ್ಲದೆ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ರಸ್ತೆ ನಿರ್ಮಾಣ ಹಾಗೂ ಗಟಾರು ನಿರ್ಮಾಣ ಮಾಡಿ ಎಲ್ಲಿಯೂ ಕೊಳಚೆ ನೀರು ನಿಲ್ಲದ ಹಾಗೆ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಚನ್ನಬಸಯ್ಯ ಕಲಹಾಳಮಠ, ಎ.ಬಿ. ರಜಪೂತ, ಚೇತು ಮೀರಜಕರ, ಫಾಯಿಮ್ ಚಕಾರಿ, ಲಿಂಗಯ್ಯ ಹಿರೇಮಠ, ಫಾಯಜ್ ಅಹ್ಮದ ಚಕಾರಿ, ಅನುಪಮಾ ಹುಗ್ಗಿ, ಶ್ವೇತಾ ಹುಗ್ಗಿ, ಎಸ್.ಬಿ. ಹಡಪದ, ಎಚ್.ಎಚ್. ನದಾಫ್, ಪರಶುರಾಮ ಜೋಗಣ್ಣವರ, ಅಂಬುಬಾಯಿ ಶಿದ್ಲಿಂಗ, ಬಾಪುಸಿಂಗ ರಜಪೂತ, ಲಾಲಸಾಬ ಕರಾಚಿ, ರಾಧಿಕಾ ಶಿದ್ಲಿಂಗ, ಮಂಜುನಾಥ ಶಿದ್ಲಿಂಗ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here