ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಸಿಂಹಾಸನಪೇಟೆಯ ದೇವರ ದಾಸಿಮಯ್ಯ ಹಟಗಾರ ಸಮಾಜದಿಂದ ನಿರ್ಮಿಸಿದ ಉಮಾದೇವಿ ಹಾಗೂ ಡಾ.ಹಂಪನಗೌಡ ಸಿನ್ನೂರ ನೂತನ ಸಮಾಜ ಭವನ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಉಪನ್ಯಾಸಕ ಕೆ.ಎಚ್. ಸಿನ್ನೂರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹಣ, ಆಸ್ತಿಗಿಂತ ಸಂಸ್ಕಾರ ಮುಖ್ಯವಾಗಿದೆ. ಹೀಗಾಗಿ ಎಲ್ಲದಕಿಂತ ದೊಡ್ಡ ಆಸ್ತಿ ಎಂದರೆ ಅದು ಸಂಸ್ಕಾರ. ಸಮಾಜದಲ್ಲಿ ನೆಮ್ಮದಿಯ ಜೀವನ ಜತೆಗೆ ಅರ್ಥಪೂರ್ಣ ಬದುಕು ಸಾಗಿಸಲು ಸಂಸ್ಕಾರ ಮುಖ್ಯವಾಗಿದೆ. ಮಕ್ಕಳಿಗೆ ಸಂಸ್ಕಾರ, ಆಚರಣೆ ಹಾಗೂ ಪರಂಪರೆಯ ಪಾಠವನ್ನು ಮನೆಯಲ್ಲಿ ತಿಳಿಸುವುದರೊಂದಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಜವಾಬ್ದಾರಿ ಎಲ್ಲ ಪಾಲಕರದ್ದಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ಸಹ ದೇಶಕ್ಕೆ ನೀಡುವ ಕೊಡುಗೆಗಳಲ್ಲಿ ಒಂದಾಗಿದೆ ಎಂದರು.
ಇದಕ್ಕೂ ಮುನ್ನ ಗೌರಾ ಹಂಪನಗೌಡ ಸಿನ್ನೂರ ಸಮಾಜ ಭವನ ಉದ್ಘಾಟಿಸಿದರು. ಡಾ. ಶೈಲಜಾ ದಯಾನಂದ ನಾಯಕ ನಾಮಫಲಕ ಅನಾವರಣಗೊಳಿಸಿದರು. ಬಳಿಕ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾಜದ ಅಧ್ಯಕ್ಷ ಪಂಪನಗೌಡ ಸಿನ್ನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಬಸಪ್ಪ ಯಂಕಂಚಿ, ಶೀವಶಂಕ್ರಪ್ಪ ರುದ್ರಗಂಟಿ, ಡಾ.ಬವರಾಜ ಬಂಟನೂರ, ಪರಮೇಶ್ವರಪ್ಪ ಜೂಚನಿ, ಮಲ್ಲಪ್ಪ ಸಿಂಹಾಸನದ, ಆನಂದ ಸಿಂಹಾಸನದ, ರಮೇಶ ಜೂಚನಿ, ರಮೇಶಗೌಡ ಸಿನ್ನೂರ, ವೀರಪ್ಪ ಜೂಚನಿ, ಬಸವರಾಜ ಯಂಕಂಚಿ ಮುಂತಾದವರಿದ್ದರು.