ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

0
naregal
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಅಬ್ಬಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.

Advertisement

ನಿಕಟಪೂರ್ವ ಅಧ್ಯಕ್ಷ ಸಕ್ರಗೌಡ ಪಾಟೀಲ ಮತ್ತು ಉಪಾಧ್ಯಕ್ಷ ಸುನೀತಾ ಬಸವರಡ್ಡೇರ ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸಿದ್ದಪ್ಪ ಬಸಪ್ಪ ಹನಮನಾಳ ಮತ್ತು ಉಪಾಧ್ಯಕ್ಷರಾಗಿ ಅಂದಪ್ಪ ಮುಡಿಯಪ್ಪ ದ್ವಾಸಲಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಪ್ರಶಾಂತ ಮುಧೋಳ ಪ್ರಕಟಿಸಿದರು.

ಬ್ಯಾಂಕ್ ನಿರೀಕ್ಷಕ ರಾಥೋಡ, ಸುರೇಶ ಬಸವರಡ್ಡೇರ, ಅಂದಪ್ಪ ವೀರಾಪೂರ, ಗುರಣ್ಣ ಅವರಡ್ಡಿ, ಶಿವಪುತ್ರಪ್ಪ ತೆಗ್ಗಿನಕೇರಿ, ಸಕ್ರಗೌಡ್ರು ಪಾಟೀಲ, ಸುನೀತಾ ಬಸವರಡ್ಡೇರ, ಲಕ್ಷ್ಮವ್ವ ಡಂಬಳ, ನಾಗನಗೌಡ ಚನ್ನಪ್ಪಗೌಡ್ರ, ಮಲ್ಲಿಕಾರ್ಜುನ ಯಲ್ಲರಡ್ಡಿ, ಈರಪ್ಪ ತಳವಾರ, ಬಸವರಾಜ ಪಲ್ಲೇದ, ಮಂಜುನಾಥ ಅಂಗಡಿ, ಎ.ಕೆ. ಮಳಗಿ, ತಾಜುದ್ದೀನ್ ದೊಡ್ಡಮನಿ, ವಿರುಪಾಕ್ಷ ಅಕ್ಕಸಾಲಿ, ಶರಣಪ್ಪ ಹೂಗಾರ, ಶಿವು ತಳಕಲ್ಲ, ಶಿವಪ್ಪ ಬಂಡಿಹಾಳ, ಹನಮಂತಪ್ಪ ಟಿ.ದ್ವಾಸಲ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.

ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹಾಗೂ ಧುರೀಣರಾದ ಮಿಥುನ್ ಜಿ.ಪಾಟೀಲ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here