ಬೆಂಗಳೂರು:- ವಿಷ್ಣು ಸರ್ ನನ್ನಂಥ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತ ಎಂದು ಹೇಳುವ ಮೂಲಕ ವಿಷ್ಣು ಸಮಾಧಿ ತೆರವು ಬಗ್ಗೆ ಉಪ್ಪಿ ಬೇಸರ ಹೊರ ಹಾಕಿದ್ದಾರೆ.
Advertisement
ಈ ಸಂಬಂಧ ಟ್ವೀಟ್ ಮಾಡಿರುವ ಉಪ್ಪಿ, ವಿಷ್ಣುವರ್ಧನ್ ಅವರ ಮೇಲಿನ ಅಪಾರ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಸವಣ್ಣನವರ ವಚನದ ಮೂಲಕ ಈ ಕೃತ್ಯವೆಸಗಿದವರಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ ಕೋಟ್ಯಂತರ ಅಭಿಮಾನಿಗಳಿಗೆ ವಿಷ್ಣುವರ್ಧನ್ ಅವರ ಸ್ಥಾನ ಎಂತದ್ದು ಎಂದು ಒಂದೇ ವಾಕ್ಯದಲ್ಲಿ ವಿವರಿಸಿದ್ದಾರೆ.
ಜಾಲತಾಣದಲ್ಲಿ ಬಸವಣ್ಣವರ ವಚನದ ಸಾಲಿನ ಮೂಲಕ ವಿಷ್ಣು ಅಮರರೆಂದು ಉಪ್ಪಿ ಬರೆದುಕೊಂಡಿದ್ದಾರೆ. ʻಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲʼ ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತಹ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತʼ ಅಂತ ಬರೆದುಕೊಂಡಿದ್ದಾರೆ.