HomeSports NewsVaibhav Suryavanshi: ವೈಭವ್ ಸೂರ್ಯವಂಶಿ ಶತಕದಬ್ಬರ: ದಿಗ್ಗಜರ ದಾಖಲೆಗಳೇ ಧ್ವಂಸ

Vaibhav Suryavanshi: ವೈಭವ್ ಸೂರ್ಯವಂಶಿ ಶತಕದಬ್ಬರ: ದಿಗ್ಗಜರ ದಾಖಲೆಗಳೇ ಧ್ವಂಸ

For Dai;y Updates Join Our whatsapp Group

Spread the love

ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾನೆ. ಅನುಭವಿ ಆಟಗಾರರಿಗೂ ಮೀರಿದ ದಿಟ್ಟ ಆಟ ಪ್ರದರ್ಶಿಸಿದ ಈ ಬಾಲ ಪ್ರತಿಭೆ, ದೇಶ–ವಿದೇಶಗಳಲ್ಲಿ ನಡೆದ ಹಲವು ಟೂರ್ನಿಗಳಲ್ಲಿ ಶತಕಗಳ ಮಳೆ ಸುರಿದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.

ಸೈಯ್ಯದ್ ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧ ವೈಭವ್ ಭರ್ಜರಿ ಶತಕ ಬಾರಿಸಿದ್ದಾನೆ. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೈಭವ್ ಕೇವಲ 58 ಎಸೆತಗಳಲ್ಲಿ ಶತಕ ಪೂರೈಸಿದನು.

ಇದಕ್ಕೂ ಮೊದಲು, ದೋಹಾದಲ್ಲಿ ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ T20 ಟೂರ್ನಿಯಲ್ಲಿ ಯುಎಇ ವಿರುದ್ಧ ವೈಭವ್ ಕೇವಲ 32 ಚಂಡುಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದ. ಯುಎಇ ಬೌಲರ್‌ಗಳನ್ನು ಮನಬಂದಂತೆ ಮಿಡಿದ ವೈಭವ್ ಈ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾನೆ.

ಇನ್ನು ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್, ವಾಷಿಂಗ್ಟನ್ ಸುಂದರ್‌ ಮೊದಲಾದ ಅಂತಾರಾಷ್ಟ್ರೀಯ ತಾರಾ ಬೌಲರ್‌ಗಳ ವಿರುದ್ಧವೂ ವೈಭವ್ ಮಿಂಚಿದ್ದಾನೆ. ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸಿದ್ದಾನೆ.

ಇಂಗ್ಲೆಂಡ್‌ನ ವೋರ್ಸೆಸ್ಟರ್‌ನಲ್ಲಿ ನಡೆದ ಯೂತ್ ODI ಪಂದ್ಯದಲ್ಲೂ ವೈಭವ್ ಆಂಗ್ಲ ಬೌಲರ್‌ಗಳನ್ನು ತತ್ತರಗೊಳಿಸಿದ್ದಾನೆ. ನಾಲ್ಕನೇ ಏಕದಿನದಲ್ಲಿ ಕೇವಲ 52 ಎಸೆತಗಳಲ್ಲಿ ಶತಕ, ಒಟ್ಟು 143 ರನ್, ಇದರಲ್ಲಿ 10 ಸಿಕ್ಸರ್‌ಗಳು ಸೇರಿದ್ದವು.

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಮತ್ತು ಬ್ರಿಸ್ಬೇನ್‌ನ ಇಯಾನ್ ಹೀಲಿ ಸ್ಟೇಡಿಯಂನಲ್ಲಿ ನಡೆದ ಯೂತ್ ಟೆಸ್ಟ್‌ಗಳಲ್ಲಿ ವೈಭವ್ ಎರಡೂ ಶತಕಗಳನ್ನು ದಾಖಲಿಸಿದ್ದಾನೆ.

  • ಚೆನ್ನೈನಲ್ಲಿ 58 ಎಸೆತಗಳಲ್ಲಿ ಶತಕ

  • ಬ್ರಿಸ್ಬೇನ್‌ನಲ್ಲಿ 78 ಎಸೆತಗಳಲ್ಲಿ ಶತಕ

ವಿಶೇಷವಾಗಿರುವುದು ಏನೆಂದರೆ, ಎರಡೂ ಶತಕಗಳು ಆಸ್ಟ್ರೇಲಿಯಾ ವಿರುದ್ಧ ಬಂದಿವೆ. ವೈಭವ್ ಸೂರ್ಯವಂಶಿ ತನ್ನ ವಯಸ್ಸಿಗಿಂತ ಹೆಚ್ಚು ಪ್ರೌಢತೆ, ಧೈರ್ಯ ಮತ್ತು ಕ್ರಿಕೆಟ್ ಜ್ಞಾನವನ್ನು ಪ್ರದರ್ಶಿಸುತ್ತಿದ್ದು, ಭವಿಷ್ಯದ ಟೀಂ ಇಂಡಿಯಾದ ಪ್ರಮುಖ ಆಟಗಾರನಾಗುವ ಸಾಧ್ಯತೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!