ಮಹರ್ಷಿ ವಾಲ್ಮೀಕಿ ಶ್ರೇಷ್ಠ ದಾರ್ಶನಿಕರು : ವಾಸುದೇವ ಸ್ವಾಮಿ

0
Valmiki Jayanti Celebration at Tehsildar Office
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲೊಂದಾದ ರಾಮಾಯಣ ಮಹಾಕಾವ್ಯ ಬರೆದ ವಾಲ್ಮೀಕಿ ಮಹರ್ಷಿಗಳು ದೇಶದ ಹೆಮ್ಮೆ. ಸರ್ವ ಜನಾಂಗದ ಆದರಣೀಯರಾದ ಅವರನ್ನು ವಾಲ್ಮೀಕಿ ಜನಾಂಗಕ್ಕೆ ಸೀಮಿತಗೊಳಿಸಬಾರದು. ಅವರ ಜೀವನ ಮೌಲ್ಯಗಳು ಎಲ್ಲ ಜನಾಂಗಕ್ಕೂ ದಾರಿದೀಪ ಎಂದು ತಹಸೀಲ್ದಾರ ವಾಸುದೇವ ಎಂ.ಸ್ವಾಮಿ ಹೇಳಿದರು.

Advertisement

ಅವರು ಗುರುವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಸಂದರ್ಭದಲ್ಲಿ ಮಾತನಾಡಿದರು.

ಸಾಧನೆ, ತಪೋಬಲದಿಂದ ಭಾರತದ ಭವ್ಯ ಸಂಸ್ಕೃತಿಯ ಪ್ರತೀಕವಾಗಿರುವ ರಾಮಾಯಣದಂತಹ ಶ್ರೇಷ್ಠ ಮಹಾಕಾವ್ಯ ವಾಲ್ಮೀಕಿ ಮಹರ್ಷಿಗಳು ಭಾರತಕ್ಕೆ ಕೊಟ್ಟ ಶ್ರೇಷ್ಠ ಕೊಡುಗೆಯಾಗಿದೆ. ಅವರು ತಿಳಿಸಿದ ಬದುಕಿನ ಮೌಲ್ಯಗಳು ನಾಗರಿಕ ಸಮಾಜಕ್ಕೆ ದಾರಿದೀಪವಾಗಿವೆ. ಸಮಾಜಕ್ಕೆ ಶ್ರೇಷ್ಠವಾದುದನ್ನು ನೀಡಿದ ದಾರ್ಶನಿಕರು. ಅಂತಹ ಮಹಾತ್ಮರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸುವುದು ತರವಲ್ಲ ಎಂದು ಹೇಳಿದರು.

ಈ ವೇಳೆ ಸಮಾಜದ ಹಿರಿಯರು, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ.ಎನ್. ರಾಟಿ ಮಾತನಾಡಿ, ಸಾಧಿಸುವ ಛಲ ಮತ್ತು ಆತ್ಮಬಲದಿಂದ ಶ್ರೇಷ್ಠವಾದುದನ್ನು ಸಾಧಿಸಬಹುದು ಎಂಬುದಕ್ಕೆ ವಾಲ್ಮೀಕಿ ಮಹರ್ಷಿಗಳು ಸಾಕ್ಷಿಯಾಗಿದ್ದಾರೆ. ದೇಶದ ಸ್ವಾತಂತ್ರಕ್ಕಾಗಿ ನಾಡು-ನುಡಿಯ ರಕ್ಷಣೆಗಾಗಿ ವಾಲ್ಮೀಕಿ ಜನಾಂಗದ ಕೊಡುಗೆ ಆಪಾರ.

ಇತ್ತೀಚಿನ ದಿನಮಾನಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಮತ್ತು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡಬಾರದು. ಇತರೇ ಸಮಾಜದವರೊಂದಿಗೆ ಸೌಹಾರ್ದತೆಯೊಂದಿಗೆ ಬದುಕುವ ಜೊತೆಗೆ ಸಮಾಜದ ಬಡವರ, ಅಸಹಾಯಕರನ್ನೂ ಮೇಲಕ್ಕೆತ್ತುವ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.

ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಸಮಾಜ ಕಲ್ಯಾಣ ಇಲಾಖೆಯ ಹೆಚ್.ಎಂ. ಅರಳಿಕಟ್ಟಿ, ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ಭೀಮಣ್ಣ ಯಂಗಾಡಿ, ರಾಜು ಓಲೇಕಾರ, ಕೆ.ಓ. ಹುಲಿಕಟ್ಟಿ, ಕಲ್ಲಪ್ಪ ಗಂಗಣ್ಣವರ, ರಾಮಣ್ಣ ಕಲಕೋಟಿ, ಮಾಂತೇಶ ಹುಣಸಿಕಟ್ಟಿ, ನಾಗರಾಜ ಹಾವಳಕೇರಿ, ಹನಮಂತ ಜಾಲಿಮರದ, ಚನ್ನಪ್ಪ ಬೆಟಸೂರ, ರಮೇಶ ದೊಡ್ಡಮನಿ, ಗಣೇಶ ಬಾಲೆಹೊಸೂರ, ಕಿರಣ ಉಳ್ಳಟ್ಟಿ, ಮಂಜಣ್ಣ ಶಿರಹಟ್ಟಿ, ನಿಂಗಪ್ಪ ಪ್ಯಾಟಿ ಸೇರಿ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here