ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ಜೈಲಿನಲ್ಲಿರುವ ದಾಸನಿಗೆ ಒಂದೊಂದು ಗಂಟೆ, ಒಂದೊಂದು ದಿನವೂ ಒಂದೊಂದು ಯುಗದಂತೆ ಭಾಸವಾಗುತ್ತಿದೆ. ಗಂಡನ ಕಾಪಾಡಲು ಪತ್ನಿ ವಿಜಯಲಕ್ಷ್ಮಿ ಅವರು ಕೊಲ್ಲೂರಿಗೆ ತೆರಳಿದ್ದರು.
Advertisement
ಭೇಟಿ ಕೊಟ್ಟ ಬೆನ್ನಲ್ಲೇ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದಿನಕರ್ ತೂಗುದೀಪ್ ಕೂಡ ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟಿದ್ದಾರೆ. ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮುಕಾಂಬಿಕೆ ಸನ್ನಿಧಿಯಲ್ಲಿ ಚಂಡಿಕಾ ಯಾಗ ಮಾಡಿಸಿದ್ದರು. ಇದೀಗ ಪೂಜೆಯ ಪ್ರಸಾದ ಸಮೇತ ದರ್ಶನ್‌ಗೆ ನೀಡಲು ವಿಜಯಲಕ್ಷ್ಮಿ ಕುಟುಂಬ ಜೈಲಿಗೆ ಭೇಟಿ ಕೊಟ್ಟಿದ್ದಾರೆ.