ಕಳಸಾಪೂರ, ಅಡವಿಸೋಮಾಪೂರ ಬಳಿ ಕಾರ್ಯಾಚರಣೆ…….
ವಿಜಯಸಾಕ್ಷಿ ಸುದ್ದಿ, ಗದಗ
ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಎರಡು ತಂಡಗಳ ಮೇಲೆ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಹನ್ನೊಂದು ಜನರನ್ನು ಬಂಧಿಸಿದ್ದಾರೆ.
ಗದಗ ತಾಲೂಕಿನ ಕಳಸಾಪೂರ ಹಾಗೂ ಅಡವಿಸೋಮಾಪೂರ ಗ್ರಾಮದ ಬಳಿ ಪ್ರತ್ಯೇಕವಾಗಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಗದಗ ಗ್ರಾಮೀಣ ಪೊಲೀಸರು ದಾಳಿ ಮಾಡಿದ್ದಾರೆ.
ಅಡವಿಸೋಮಾಪೂರ ಗ್ರಾಮದ ಬಳಿಯ ಗದಗ-ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಬ್ರಿಡ್ಜ್ ಕೆಳಗೆ ಪುರದಹಳ್ಳದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಅಡವಿಸೋಮಾಪೂರ ಗ್ರಾಮದ ರಮಜಾನಸಾಬ ತಂದೆ ಮೌಲಾಸಾಬ ಅಗಸಿಮನಿ, ಯಲ್ಲಪ್ಪ ತಂದೆ ಭೀಮಪ್ಪ ಹೊಂಬಳ, ಇಮಾಮಸಾಬ ತಂದೆ ಅಲಿಸಾಬ ನದಾಫ್, ದೇವಪ್ಪ ತಂದೆ ಪಕೀರಪ್ಪ ಕೊಟೆಣ್ಣವರ, ಮಂಜುನಾಥ್ ತಂದೆ ಮಲ್ಲಪ್ಪ ಮವರಿ ಹಾಗೂ ರಾಮಪ್ಪ ತಂದೆ ಬೀಮಪ್ಪ ಹೊಂಬಳ ಇವರನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿರುವ ಗ್ರಾಮೀಣ ಪೊಲೀಸರು, ಬಂಧಿತ ಆರೋಪಿಗಳಿಂದ 4010 ರೂಪಾಯಿಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 231/2023 Karnataka police act, 1963(U/s-87)ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಐದು ಜನರನ್ನು ಬಂಧಿಸಲಾಗಿದೆ.
ಗದಗ ತಾಲೂಕಿನ ಕಳಸಾಪೂರ ಗ್ರಾಮದ ಬಳಿ ಇರುವ ಬೆಕ್ಕಿನ ಹಳ್ಳದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಐವರ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಗದಗ ತಾಲೂಕಿನ ಕಳಸಾಪೂರ ಗ್ರಾಮದ ಬಳಿ ಇರುವ ಬೆಕ್ಕಿನ ಹಳ್ಳದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗದಗನ ಚನ್ನಮ್ಮ ಸರ್ಕಲ್ ಹತ್ತಿರದ ನಿವಾಸಿ ಕಿರಣ ತಂದೆ ಆನಂದ ಮುಳಗುಂದ, ಹುಡ್ಕೋ ಕಾಲೋನಿಯ ವಿಶಾಲರಡ್ಡಿ ತಂದೆ ರಂಗಪ್ಪ ಕೋಣಿ, ವಡ್ಡರಗೇರಿಯ ಸಂಜಯ ತಂದೆ ಹನಮಂತಪ್ಪ ದಾಸರ, ಉಡಚಮ್ಮನ ಗುಡಿ ಬಳಿಯ ನಿವಾಸಿ ಶರಣಪ್ಪ ತಂದೆ ಬಾಲಚಂದ್ರ ಬಾರಕೇರ ಹಾಗೂ ಮಹಮ್ಮದ್ ಮುಕ್ತಾರ ತಂದೆ ಜಿನ್ನಾಸಾಬ ತಹಸೀಲ್ದಾರ ಇವರನ್ನು ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಬಂಧಿತರಿಂದ 2120 ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯ ಶಿವಾನಂದ ಪಾಟೀಲ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.
ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ 0232/2023 Karnataka police act, 1963(U/s-87) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.