ಚುನಾವಣಾ ಪ್ರಚಾರಕ್ಕೆ ಒಂಟಿ ಬಳಕೆ ಆರೋಪ: ನಗರಸಭೆ ಸದಸ್ಯನ ವಿರುದ್ಧ ಪ್ರಕರಣ ದಾಖಲು

0
Spread the love

ಪ್ರಾಣಿ ಹಿಂಸೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ……

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಬಿಜೆಪಿ ಪಕ್ಷದ ಪರವಾಗಿ ಒಂಟೆಯನ್ನು ಬಳಸಿ ಪ್ರಚಾರ ನಡೆಸಿದ ಆರೋಪದ ಮೇಲೆ ಬಿಜೆಪಿ ಪಕ್ಷದ ಅಧ್ಯಕ್ಷ ಶಿದ್ದಲಿಂಗಪ್ಪ(ಅನಿಲ್)‌ ಅಬ್ಬಿಗೇರಿ ವಿರುದ್ಧ ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏ.18ರಂದು ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ನಂತರ ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೆ ಗದಗ ರಾಚೋಟೇಶ್ವರ ಗುಡಿಯಿಂದ ಜಗದೀಶ ಶಿರೋಳರ ಬಯಲು ಜಾಗದವರೆಗೆ ಒಂಟೆಯನ್ನು ಬಳಸಿಕೊಂಡು, ಬಿಜೆಪಿ ಪಕ್ಷದ ಧ್ವಜವನ್ನು ಅಳವಡಿಸಿಕೊಂಡು ಪ್ರಚಾರ ನಡೆಸಲಾಗಿತ್ತು.

ಪ್ರಾಣಿಯೊಂದಕ್ಕೆ ಹಿಂಸೆ ನೀಡಿದ್ದಲ್ಲದೆ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಆರೋಪಿತರ ವಿರುದ್ಧ 0049/2023, ಕರ್ನಾಟಕ ಓಪನ್‌ ಪ್ಲೇಸ್‌ ಡಿಸ್‌ಫಿಗರ್ಮೆಂಟ್‌ ಕಾಯ್ದೆ ಮತ್ತು ಕಲಂ-11, ದಿ. ಪ್ರಿವೆನ್ಷನ್‌ ಆಫ್‌ ಕ್ರೂಯಲ್ಟಿ ಟು ಅನಿಮಲ್ಸ್‌ ಕಾಯ್ದೆ-1960ರ ಅಡಿ ದೂರು ದಾಖಲಾಗಿದೆ.

ಸಧ್ಯ ಚುನಾವಣಾ ಫ್ಲೈಯಿಂಗ್‌ ಸ್ಕ್ವಾಡ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಸಂತೋಷ ನೀಲಕಂಠ ಹಂದಿಗನೂರು ನೀಡಿರುವ ದೂರನ್ನು ಸ್ವೀಕರಿಸಿರುವ ಗದಗ ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here