ಗದಗನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಪಲ್ಟಿ; 15 ಕ್ಕೂ ಹೆಚ್ಚು ಜನರಿಗೆ ಗಾಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ/ ಹರಪನಹಳ್ಳಿ

Advertisement

ಅತಿಯಾದ ವೇಗದಿಂದ ಹೊರಟಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮವಾಗಿ ಬಸ್ ನಲ್ಲಿ ಇದ್ದ ಸುಮಾರು 15 ಕ್ಕೂ‌ ಹೆಚ್ಚು ಜನರು ಗಾಯಗೊಂಡ ಘಟನೆ ಹರಪನಹಳ್ಳಿ ಪಟ್ಟಣದ ಸಮೀಪ ಮಂಗಳವಾರ ಮಧ್ಯರಾತ್ರಿ ಜರುಗಿದೆ.

ಗಾಯಗೊಂಡವರನ್ನು ದಾವಣಗೆರೆ ಹಾಗೂ ಹರಪನಹಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾತ್ರಿ 12;30 ರ ಸುಮಾರಿಗೆ ಹರಪನಹಳ್ಳಿ ದಾಟಿ ಐದು ಕಿಲೋಮೀಟರ್ ದೂರದಲ್ಲಿ ಬಸ್ ಉರುಳಿ ಬಿದ್ದಿದೆ. ಹಲವರ ತಲೆಗೆ, ಕೈ, ಕಾಲು, ಎದೆಗೆ ಪೆಟ್ಟು ಬಿದ್ದಿವೆ. ಇವರೆಲ್ಲರೂ ಗ್ಲಾಸ್ ಹೊಡೆದು ಹೊರಬಂದಿದ್ದಾರೆ.

ಕೊರ್ಲಹಳ್ಳಿ ಬಳಿ ಊಟಕ್ಕೆ ನಿಲ್ಲಿಸಿದ್ದ ಚಾಲಕರು, ಊಟದ ಬಳಿಕ ಬಸ್ ಹೊರಟಿದೆ. ಆ ನಂತರ ಬಸ್ ನ ವೇಗ ಜಾಸ್ತಿಯಾಗಿದೆ. ಪ್ರಯಾಣಿಕರು ಎಷ್ಟು ಕೂಗಾಡಿದರೂ ಚಾಲಕ ಉಡಾಪೆಯಿಂದ ದಬಾಯಿಸಿದ್ದಾನೆ ಎಂದು ತಿಳಿದು ಬಂದಿದೆ.

ನಂತರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಆಗಮಿಸಿದ ಹರಪನಹಳ್ಳಿ ಪೊಲೀಸರು, ಬಸ್ ನಲ್ಲಿ ಸಿಲುಕಿಕೊಂಡಿದ್ದ ಕೆಲವರನ್ನು ಹೊರತಂದರು.

ಗಾಯಗೊಂಡವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರು.

ಕುಕ್ಕೆ ಹೆಸರಿನಲ್ಲಿ ಖಾಸಗಿ ಬಸ್ ಗದಗನಿಂದ ಬೆಂಗಳೂರಿಗೆ ಹೊರಟಿತ್ತು ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಅದೇ‌ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಡಾ. ಬಸವರಾಜ್ ತಳವಾರ, ಚಾಲಕನಿಗೆ ಎರಡು ಭಾರಿ ಎಚ್ಚರಿಕೆ ನೀಡಿದರೂ ನಮ್ಮ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಗಾಡಿ ಓಡಸೋದು ಗೊತ್ತು ಬಿಡಿ ಅಂತ ಪ್ರತಿಕ್ರಿಯೆ ನೀಡಿದ ಚಾಲಕನ ನಿರ್ಲಕ್ಷ್ಯವೆ ಅಪಘಾತಕ್ಕೆ ಕಾರಣ ಎಂದ ಅವರು, ಗದಗ, ಡಂಬಳ‌ ಹಾಗೂ ಮುಂಡರಗಿಯಿಂದ ಹತ್ತಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರೆಲ್ಲರನ್ನು ದಾವಣಗೆರೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here