ಮತ್ತೀಬ್ಬರು ಗಾಯ…….ಸ್ಥಳಕ್ಕೆ ಪೊಲೀಸರ ಭೇಟಿ… ಪರಿಶೀಲನೆ
Advertisement
ವಿಜಯಸಾಕ್ಷಿ ಸುದ್ದಿ, ರಾಯಚೂರು
ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ತಾಯಿ ಹಾಗೂ ಮಗು ಸ್ಥಳದಲ್ಲಿಯೇ ಮೃತಪಟ್ಟು, ಮತ್ತೀಬ್ಬರು ಗಾಯಗೊಂಡ ದುರ್ಘಟನೆ ಮಧ್ಯರಾತ್ರಿ ನಡೆದಿದೆ.
ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ನಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ತಾಯಿ ಭಾರತಿ ಉಮೇಶ್(39), ಮಗ ಉದಯಶಂಕರ್(8) ಮೃತಪಟ್ಟಿದ್ದಾರೆ.
ಮೃತರು ಲಿಂಗಸಗೂರು ತಾಲೂಕಿನ ಯರದೊಡ್ಡಿ ಗ್ರಾಮದ ನಿವಾಸಿಗಳಾಗಿದ್ದು,
ಯರದೊಡ್ಡಿಯಿಂದ ಮರಿಯಮ್ಮನಹಳ್ಳಿ ಕಡೆ ಬೈಕ್ ನಲ್ಲಿ ಹೊರಟಿದ್ದರು ಎನ್ನಲಾಗಿದೆ.
ಇಲಕಲ್ಲ ಮಾರ್ಗವಾಗಿ ಮುದಗಲ್ ಪಟ್ಟಣದತ್ತ ಕಾರು ಬರುತ್ತಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ, ತಾಯಿ-ಮಗನ ಮೃತದೇಹ ಮುದಗಲ್ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.