ವಿಜಯಸಾಕ್ಷಿ ಸುದ್ದಿ, ಗದಗ
ಸಿಮೆಂಟ್ ಕಂಪನಿಗಳ ಪ್ರತಿನಿಧಿಗಳು ಎಂದು ಹೇಳಿಕೊಂಡು ಯಾರೋ ಇಬ್ಬರು ಆರೋಪಿತರು 4 ಸಾವಿರ ನಾನ್ ಟ್ರೇಡ್ ಸಿಮೆಂಟ್ ಚೀಲಗಳನ್ನು ಕಳಿಸುತ್ತೇವೆಂದು ಹೇಳಿ ಹಣ ಪಡೆದುಕೊಂಡು ಮೋಸವೆಸಗಿರುವ ಬಗ್ಗೆ ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.24ರ ಬೆಳಗಿನ 11.30ರಿಂದ ಮಾರ್ಚ್.13ರ ಮಧ್ಯಾಹ್ನ 12.30ರವರೆಗೂ ಈ ಕುರಿತು ಹಣ ವರ್ಗಾವಣೆಯಾಗಿದೆ.
ಪ್ರಕರಣದಲ್ಲಿ ಮೋಸ ಹೋಗಿರುವ ಲಕ್ಷ್ಮೇಶ್ವರದ ಮೊಮಿನ್‌ಗಲ್ಲಿಯ ವ್ಯಾಪಾರಿ ಎಂ.ಡಿ.ಮುಸ್ತಫಾ ಬಳ್ಳಾರಿ ಈ ಬಗ್ಗೆ ನೀಡಿದ ದೂರಿನಲ್ಲಿ, ಮುಂಬೈನ ಡಾಲ್ಮಿಯಾ ಸಿಮೆಂಟ್.ಲಿ ಹಾಗೂ ಬಿರ್ಲಾ ಶಕ್ತಿ ಸಿಮೆಂಟ್ ಕಂಪನಿಗಳ ಪ್ರತಿನಿಧಿಗಳು ಎಂದು ಹೇಳಿಕೊಂಡ ಆರೋಪಿತರಾದ ರವೀಂದ್ರ ಶರ್ಮಾ ಹಾಗೂ ರೋಹಿತ್ ಅಗರವಾಲ ಈ ಇಬ್ಬರು ಆರೋಪಿತರ ಮೇಲೆ ಪ್ರಕರಣ ದಾಖಲಾಗಿದೆ.
ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ 4000 ಚೀಲ ನಾನ್ ಟ್ರೇಡ್ ಸಿಮೆಂಟ್ ಕಳಿಸುತ್ತೇವೆ ಎಂದು ಹೇಳಿ ಡಿಪಾಸಿಟ್, ಕೋಡ್ ಜನರೇಟ್ ಮಾಡಲು ಇನ್ಸುರನ್ಸ್ ಬಿಲ್ ಟು ಬಿಲ್, ಅಗ್ರಿಮೆಂಟ್ ಎಂದು ನಾನಾ ಕಾರಣಗಳನ್ನು ಹೇಳಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟೂ 67,05,600 ರೂ. ಹಣ ಹಾಕಿಸಿಕೊಂಡು ಮಟೀರಿಯಲ್ ಕಳಿಸದೇ, ಹಣವನ್ನೂ ವಾಪಸ್ ಮಾಡದೇ ಮೋಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗದಗ ಸಿಇಎನ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.