ಸಿಇಎನ್‌ ಪೊಲೀಸರ ಕಾರ್ಯಾಚರಣೆ: 8,28,500 ರೂ. ಮೌಲ್ಯದ ಗಾಂಜಾ ವಶಕ್ಕೆ

0
Spread the love

ಗೋವಾ ರಾಜ್ಯಕ್ಕೆ ಹೊರಟಿತ್ತಾ ಗಾಂಜಾ…..?

Advertisement

ವಿಜಯಸಾಕ್ಷಿ ಸುದ್ದಿ, ಗದಗ

ಖಚಿತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಗದಗ ಸಿಇಎನ್‌ ಠಾಣೆಯ ಪೊಲೀಸರು, ಅನಧಿಕೃತವಾಗಿ ಬಸ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಿ, 8 ಕೆಜಿ 285 ಗ್ರಾಂ. ಗಾಂಜಾ ವಶಕ್ಕೆ ಪಡೆದಿದ್ದಾರೆ.

ಏಪ್ರಿಲ್‌ 26ರಂದು ಮಧ್ಯಾಹ್ನ 4 ಗಂಟೆಯ ಸುಮಾರಿಗೆ ಆರೋಪಿತರು ತಮ್ಮ ಸ್ವಂತ ಲಾಭದ ಉದ್ದೇಶದಿಂದ ಅನಧಿಕೃತವಾಗಿ 8,28,500 ರೂ. ಬೆಲೆಬಾಳುವ 8 ಕೆಜಿ 285 ಗ್ರಾಂ. ಒಣಗಿದ ಎಲೆ, ಕಾಂಡ, ಬೀಜಗಳಿರುವ ಗಾಂಜಾವನ್ನು ಟ್ರಾವೆಲ್‌ ಬ್ಯಾಗ್‌ನಲ್ಲಿಟ್ಟುಕೊಂಡು ಬಳ್ಳಾರಿ-ಗದಗ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಈ ಬಗ್ಗೆ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಅಪರಾಧ 0032/2023, Narcotic Drugs and Psychotropic Substances Act-1985 ಕಾಯ್ದೆ, ಕಲಂ 20(ಬಿ)(2)(ಬಿ) ಅನ್ವಯ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here