ಪಾರ್ಟ್‌ಟೈಮ್ ಜಾಬ್ ಆಫರ್ ನಂಬಿ 39 ಲಕ್ಷ ಹಣ ಕಳೆದುಕೊಂಡ ಇಂಜಿನಿಯರ್..!

0
Spread the love

 

Advertisement

ಮಿಸ್ ಆನಿಕಾ ಸೇರಿ ಐವರಿಂದ ಚೀಟಿಂಗ್

ವಿಜಯಸಾಕ್ಷಿ ಸುದ್ದಿ, ಗದಗ

ಸೈಬರ್ ಕ್ರೈಮ್ ಪೊಲೀಸರು, ಜಿಲ್ಲಾ ಪೊಲೀಸ್ ಇಲಾಖೆ ಸಾಕಷ್ಟು ಸಲ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರೂ ಮತ್ತೆ ಮತ್ತೆ ಜನರು ಮೋಸ ಹೋಗುತ್ತಿರುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಅನಕ್ಷರಸ್ಥ ಜನರು ಮೋಸಹೋಗಬಹುದು. ಆದರೆ ಅಕ್ಷರ ಜ್ಞಾನ ಹೊಂದಿದವರೇ ಮೋಸ ಹೋಗುತ್ತಿರುವುದು ವಿಪರ್ಯಾಸ.

ಇದನ್ನೂ ಓದಿ ಗದಗ ಶಹರ ಪೊಲೀಸರ ಕಾರ್ಯಾಚರಣೆ; ಎಸ್.ಎಮ್ ಕೃಷ್ಣ ನಗರದ ಉಸ್ತಾದ್ ಬಂಧನ

ಈಗಿನ ಕಾಲದಲ್ಲಿ ದುಡಿದ ಹಣವೇ ಸರಿಯಾಗಿ ಸಿಗುವುದು ಕಷ್ಟ. ಹೀಗಿದ್ದರೂ ತುರ್ತಾಗಿ ಹಣ ಗಳಿಸುವ ದುರಾಸೆಗೆ ಬಿದ್ದು ಹಣ ಕಳೆದಕೊಳ್ಳವವರ ಸಂಖ್ಯೆಗೇನೂ ಕಡಿಮೆ ಇಲ್ಲ.

ಇಲ್ಲೊಂದು ಪ್ರಕರಣದಲ್ಲಿ ಮಿಸ್ ಆನಿಕಾ ಎಂಬವರು ಕಳುಹಿಸಿದ ಪಾರ್ಟ್‌ಟೈಮ್ ಜಾಬ್ ಆಫರ್‌ನ ಮೆಸೇಜ್ ನಂಬಿ ಇಂಜಿನಿಯರ್ ಒಬ್ಬರು ಬರೋಬ್ಬರಿ 39 ಲಕ್ಷದ 15 ಸಾವಿರ ರೂ.ಗಳನ್ನು ಕಳೆದುಕೊಂಡು ಮೋಸಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ ಶಹರ ಪೊಲೀಸರ ಕಾರ್ಯಾಚರಣೆ; ಬೈಕ್ ಕಳ್ಳ, ಎಮ್‌ಟಿಆರ್ ಏಜೆಂಟ್‌ನ ಬಂಧನ

ಗದಗ ಶಹರದ ಹುಡ್ಕೋ ಕಾಲೋನಿಯ ಸಂದೀಪ ತಂದೆ ರಂಗನಗೌಡ ಪಾಟೀಲ ಎಂಬ ಇಂಜಿನಿಯರ್ ಆಗಸ್ಟ್ 4ರಿಂದ 8ರವರೆಗೆ ತಮಗೆ 9593989404 ಈ ನಂಬರ್‌ನಿಂದ ಮಿಸ್ ಆನಿಕಾ ಎಂಬುವರು ವಾಟ್ಸ್‌ಅಪ್‌ನಲ್ಲಿ ಪಾರ್ಟ್‌ಟೈಮ್ ಜಾಬ್ ಆಫರ್‌ನ ಮೆಸೇಜ್ ಕಳುಹಿಸಿದ್ದಾರೆ.

ನಂತರ ಲಿಯಾ @Lia9913, ಕಿರಣರಾವ್@KiranRao01231311 ನತಾಶಾ@NT13454 ಮತ್ತು ಕಿಶೋರ್ @Kishore55031 ಎಂಬುವರು ವಿವಿಧ ಟಾಸ್ಕ್ ಗಳನ್ನು ಕೊಟ್ಟು 20ಲಕ್ಷ, 24ಸಾವಿರದ, 800ರೂ.ಗಳನ್ನು ಅಕೌಂಟ್‌ನಲ್ಲಿ ಹಾಕಿ ಆಶೆ ಹುಟ್ಟಿಸಿದ್ದಾರೆ.

ಆ ಹಣ ವಿತ್‌ಡ್ರಾ ಮಾಡಲು ಹೋದಾಗ ಅಕೌಂಟ್ ಪ್ರೀಜ್ ಮಾಡಿ ಅನ್ಪ್ರೀಜ್ ಮಾಡಲು ಹಂತ-ಹಂತವಾಗಿ 39ಲಕ್ಷ, 15 ಸಾವಿರಗಳನ್ನು ಹಾಕಿಸಿಕೊಂಡು ಇನ್ನೂ ಐದು ಲಕ್ಷ ಹಾಕಬೇಕು ಎಂದು ಮೆಸೇಜ್ ಕಳುಹಿಸಿ ಮೋಸ ಮಾಡಿದ್ದಾರೆ.

ಈ ಕುರಿತು ಇಂಜಿನಿಯರ್ ಸಂದೀಪ್ ತಂದೆ ರಂಗನಗೌಡ ಪಾಟೀಲ ಸಿಇಎನ್ ಠಾಣೆಗೆ ದೂರು ನೀಡಿದ್ದು, 0061/2023 INFORMATION TECHNOLOGY ACT ೨೦೦೮(U/s-66(D))ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here