ಗೋವಿಂದಪ್ಪ ಬಂಧನ……
ವಿಜಯಸಾಕ್ಷಿ ಸುದ್ದಿ, ಗದಗ
ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಒಣಗಿದ ಗಾಂಜಾ ಮಾರಾಟ ಮಾಡುತ್ತಿರುವ ಆರೋಪಿಯೊಬ್ಬನನ್ನು ಗದಗ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಡವಿಹೊಸೂರು ಗ್ರಾಮದ ಬೆಳ್ಳಟ್ಟಿ-ಹೊಳೆ ಇಟಗಿ ರಸ್ತೆಯ ನೀರಿನ ಟ್ಯಾಂಕ್ ಬಳಿ ಆರೋಪಿತನಾದ ಶಿರಹಟ್ಟಿ ವಡವಿಹೊಸೂರ ಗ್ರಾಮದ ಗೋವಿಂದಪ್ಪ ಕೆಂಚಪ್ಪ ತಾಮ್ರಗುಂಡಿ ಎಂಬಾತ 1217 ಗ್ರಾಂ. ತೂಕದ ಎಲೆ, ಹೂ, ಬೀಜ, ಕಾಂಡವೂ ಒಳಗೊಂಡಂತೆ ಒಣಗಿದ ಗಾಂಜಾವನ್ನು ಗೊಬ್ಬರದ ಚೀಲದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಪೊಲೀಸರು ಆತನಿಂದ 60,850 ರೂ. ಬೆಲೆಬಾಳುವ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.