ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ಮನೆಯ ಬಾಗಿಲಿನ ಚಿಲಕದ ಕೊಂಡಿಯನ್ನು ಮುರಿದು, ಮನೆಯೊಳಗೆ ಪ್ರವೇಶಿಸಿ, ಅಲ್ಮೆರಾದಲ್ಲಿ ಇರಿಸಿದ್ದ ಬಂಗಾರದ ಆಭರಣ, ನಗದು ಹಣವನ್ನೂ ಸೇರಿ ಕಳ್ಳತನ ಮಾಡಿರುವ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಿ.26.2.2023ರ ಮಧ್ಯಾಹ್ನ 3ಗಂಟೆಯಿಂದ ದಿ. 28.2.2023ರ ಸಾಯಂಕಾಲ 6 ಗಂಟೆಯ ನಡುವಿನ ಸಮಯದಲ್ಲಿ ದೂರುದಾರ ದೇವಿಹಾಳ ಗ್ರಾಮದ ಯಲ್ಲಪ್ಪ ರಾಮಣ್ಣ ಬಡ್ನಿ ಇವರ ಮನೆಯ
ಮುಂಚಿಬಾಗಿಲಿನ ಚಿಲಕದ ಕೊಂಡಿ ಮುರಿದು, ಬಾಗಿಲು ತೆರೆದು ಒಳ ಪ್ರವೇಶಿಸಿದ ಕಳ್ಳರು, ಅಲ್ಮೆರಾದಲ್ಲಿ ಇಟ್ಟಿದ್ದ 10 ಗ್ರಾಂ. ತೂಕದ 40 ಸಾವಿರ ರೂ. ಬೆಲೆಬಾಳುವ ಒಂದು ಜೊತೆ ಬಂಗಾರದ ಝುಮಕಿ ಹಾಗೂ 500 ರೂ. ಮುಖಬೆಲೆಯ 95 ಸಾವಿರ ರೂ. ನಗದು ಸೇರಿ ಒಟ್ಟೂ 1.35 ಲಕ್ಷ ರೂ. ಮೌಲ್ಯದ ಸೊತ್ತು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶಿರಹಟ್ಟಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.