ನಿವೃತ್ತ ಡಿಎಚ್ಓ ಸತೀಶ್ ಬಸರಿಗಿಡದ ಅವರ ಪುತ್ರನ ಮನೆಯಲ್ಲಿ ಕಳ್ಳತನ…..
ವಿಜಯಸಾಕ್ಷಿ ಸುದ್ದಿ, ಗದಗ
ಮನೆಯ ಹಿತ್ತಲ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು, ಬೆಡ್‌ರೂಮಿನ ಟ್ರೆಝರಿಯಲ್ಲಿದ್ದ ಬಂಗಾರದ ಆಭರಣಗಳು, ನಗದು ಹಣವನ್ನು ದೋಚಿರುವ ಘಟನೆ ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪು ಸುಲ್ತಾನ್ ವೃತ್ತದ ಬಳಿಯ ಸಜ್ಜನ್ನರ ಲೇಔಟ್‌ನ ಆಕಾಶ್ ಸತೀಶ ಬಸರಿಗಿಡದ ಎಂಬುವರ ಮನೆಯಲ್ಲಿ ನಡೆದಿದೆ.
ಫೆ.7ರ ರಾತ್ರಿ 7 ಗಂಟೆಯಿಂದ ಫೆ.8ರ ರಾತ್ರಿ 8.30ರ ಸಮಯದಲ್ಲಿ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಈ ಸಮಯದಲ್ಲಿ ಮನೆಯ ಹಿತ್ತಲಿನ ಬಾಗಿಲನ್ನು ಮುರಿದು ಒಳಸೇರಿದ ಕಳ್ಳರು ಬೆಡ್‌ರೂಮ್‌ನ ಬಾಗಿಲನ್ನು ಒಡೆದು, ಒಳಗಿದ್ದ ಟ್ರೆಝರಿಯನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, 80 ಸಾವಿರ ರೂ ಬೆಲೆಯ 20 ಗ್ರಾಂ. ತೂಕದ ಕರಿಮಣಿ ಸರ, 40 ಗ್ರಾಂ. ತೂಕದ 1.60 ಲಕ್ಷ ರೂ ಬೆಲೆಯ ಬಂಗಾರದ ಕಡಿ, 40 ಸಾವಿರ ರೂ. ಬೆಲೆಯ 10 ಗ್ರಾಂ ತೂಕದ ಬಂಗಾರದ ಉಂಗುರ, 12 ಗ್ರಾಂ ತೂಕದ 45 ಸಾವಿರ ರೂ ಬೆಲೆಬಾಳುವ ಬಂಗಾರದ ನೆಕ್ಲೆಸ್,
60 ಸಾವಿರ ಬೆಲೆಯ 15 ಗ್ರಾಂ ತೂಕದ ಸುತ್ತುಂಗುರ, 6 ಗ್ರಾಂ ತೂಕದ 22 ಸಾವಿರ ರೂ ಬೆಲೆಯ ಹರಳಿನ ಉಂಗುರ, 6 ಗ್ರಾಂ ತೂಕದ 22 ಸಾವಿರ ರೂ. ಬೆಲೆಬಾಳುವ ಮುತ್ತಿನ ಸರ, 20 ಗ್ರಾಂ ತೂಕದ 80 ಸಾವಿರ ರೂ ಬೆಲೆಯುಳ್ಳ ಬಂಗಾರದ ಕಿವಿಯೋಲೆ, 15 ಗ್ರಾಂ ತೂಕದ 60 ಸಾವಿರ ರೂ. ಬೆಲೆಯ ತಾಳಿ ಸರ, 10 ಗ್ರಾಂ ತೂಕದ 40 ಸಾವಿರ ರೂ. ಬೆಲೆಬಾಳುವ ಚಿನ್ನದ ಸರ,
2 ಗ್ರಾಂ ತೂಕದ 8 ಸಾವಿರ ರೂ. ಬೆಲೆಯ ಬಂಗಾರದ ನಾಣ್ಯ ಸೇರಿದಂತೆ ಒಟ್ಟೂ 156 ಗ್ರಾಂ. ತೂಕದ 6.17 ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣಗಳು ಹಾಗೂ 2 ಲಕ್ಷ ರೂ. ನಗದು ಹಣ ಹೀಗೆ ಒಟ್ಟೂ 8.17 ಲಕ್ಷ ರೂ. ಸೊತ್ತನ್ನು ಕಳ್ಳತನ ಮಾಡಲಾಗಿದೆ ಎಂದು ಫಿರ್ಯಾದಿ ಆಕಾಶ್ ತಂದೆ ಸತೀಶ್ ಬಸರಿಗಿಡದ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.