ವಿಜಯಸಾಕ್ಷಿ ಸುದ್ದಿ, ಗದಗ
ಈರುಳ್ಳಿ, ಮೆಣಸಿನಕಾಯಿ ಬೆಳೆಯಲ್ಲಿ ಗಾಂಜಾ ಗಿಡ ಬೆಳೆದಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ರೋಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಸಹೋದರರನ್ನು ವಶಕ್ಕೆ ಪಡೆದು, 80 ಸಾವಿರ ರೂ. ಮೌಲ್ಯದ ಐವತ್ತು ಗಾಂಜಾ ಗಿಡ ಜಪ್ತಿ ಮಾಡಿದ್ದಾರೆ.
ರೋಣ ತಾಲೂಕಿನ ಮಲ್ಲಾಪೂರ ಗ್ರಾಮದ ಹದ್ದಿನಲ್ಲಿ ಇರುವ ಜಮೀನಿನಲ್ಲಿ ಗಾಂಜಾ ಗಿಡ ಬೆಳೆದ ಆರೋಪದಲ್ಲಿ ಮಲ್ಲನಗೌಡ ಭರಮಗೌಡ ಹಾಗೂ ಚಂದ್ರಗೌಡ ಭರಮಗೌಡ ಎಂಬುವರನ್ನು ರೋಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಎಸ್ಐ ಚಂದ್ರಶೇಖರ ಹೆರಕಲ್ಲ ನೇತೃತ್ವದಲ್ಲಿ ಸಿಬ್ಬಂದಿ ಈ ದಾಳಿ ಮಾಡಿದ್ದರು. 80 ಸಾವಿರ ರೂ. ಮೌಲ್ಯದ 16 ಕೆ.ಜಿ ತೂಕದ 50 ಗಿಡ ಜಪ್ತಿ ಮಾಡಿದ್ದು, 186/2022 ಕಲಂ 20: (ಎ)ಎನ್ ಡಿ ಪಿ ಎಸ್ ಆ್ಯಕ್ಟ್ 1985 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



