ಗದಗ: ಕನ್ನಡಪ್ರಭ ಛಾಯಾಗ್ರಾಹಕ ಶಂಕರ ಗುರಿಕಾರ ಅವರ ತಾಯಿ ಸಂಗಮ್ಮ ಯಮನಪ್ಪ ಗುರಿಕಾರ (76) ಗದಗ ನಗರದ ಅವರ ನಿವಾಸದಲ್ಲಿ ಮಂಗಳವಾರ ನಿಧನರಾದರು.
Advertisement
ಅಂತ್ಯ ಸಂಸ್ಕಾರ ಅವರ ಸ್ವಂತ ಊರಾದ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ದಿ.26-10-2022ರ ಬುಧವಾರ ಬೆಳಗ್ಗೆ ನೆರವೇರಲಿದೆ. ಮೃತರಿಗೆ 4 ಜನ ಹೆಣ್ಣು ಮಕ್ಕಳು, 5 ಜನ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮೊಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಹೊಂದಿದ್ದರು.
ಸಂತಾಪ: ಸಂಗಮ್ಮ ಅವರ ನಿಧನಕ್ಕೆ ಕನ್ನಡಪ್ರಭ ಸಂಪಾದಕರು, ವರದಿಗಾರರು ಹಾಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಗದಗ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.