ಮೈಸೂರು: ಹುಲಿ ದಾಳಿ ತಪ್ಪಿಸಿ, ಮನುಷ್ಯರ ಜೀವ ರಕ್ಷಿಸಿ ಎಂದು ಹನಗೋಡು ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಟಯರ್ ಗೆ ಬೆಂಕಿಹಚ್ಚಿ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಲಿ ವಾರದಲ್ಲಿ ಎಂಟು ಹಸು, ಹದಿನೈದು ಮೇಕೆ ತಿಂದಿದೆ. ಹುಲಿ ದಾಳಿಗೆ ಹೆದರಿ ಜನರು ಮನೆಯಿಂದ ಹೊರತ್ತಿಲ್ಲ, ಹುಲಿಸೆರೆಗೆ ಮುಂದಾಗದ ಅರಣ್ಯಸಿಬ್ಬಂದಿ ವಿರುದ್ಧ ಜನರು ಸಿಡಿದೆದ್ದಿದ್ದು, ಹುಲಿ ಸೆರೆ ಹಿಡಿಯುವತನಕ ಬಂದ್ ನಿಲ್ಲಿಸಲ್ಲ ಅಂತ ಪ್ರತಿಭಟನೆ ನಡೆಸಿದ್ದಾರೆ.



