ಯಾದಗಿರಿಯಲ್ಲಿ ವೈರಲ್ ಫೀವರ್ ಹೆಚ್ಚಳ: ಮಕ್ಕಳಲ್ಲಿ ಹೆಚ್ಚಿದ ಅನಾರೋಗ್ಯ – ಪೋಷಕರಲ್ಲಿ ಆತಂಕ

0
Spread the love

ಯಾದಗಿರಿ‘- ನಗರದಲ್ಲಿ ವೈರಲ್ ಫೀವರ್ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳು ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

Advertisement

ಮಕ್ಕಳಲ್ಲಿ ಕೆಮ್ಮು, ನೆಗಡಿ, ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪೋಷಕರು ಆಸ್ಪತ್ರೆಗೆ ಮುಗಿಬೀಳುತ್ತಿದ್ದಾರೆ. ನಿತ್ಯ ವೈದ್ಯರು 150ಕ್ಕೂ ಅಧಿಕ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದು, ಮಳೆಯಿಂದ ಹವಾಮಾನ ಬದಲಾಗುತ್ತಿರುವ ಕಾರಣ ಈ ರೀತಿಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಓಪಿಡಿ ಚೀಟಿ ವಿತರಿಸಿರುವ ಕೌಂಟರ್ ಸಂಖ್ಯೆಯನ್ನು ಹೆಚ್ಚಿಸಿದರೂ ಕೂಡ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಇರುವ ಬೆಡ್‌ಗಳಲ್ಲಿಯೇ ಅಡ್ಜಸ್ಟ್ ಮಾಡಿಕೊಂಡು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಈ ಕುರಿತು ಮಕ್ಕಳ ತಜ್ಞ ವೈದ್ಯ ಡಾ.ಕುಮಾರ್ ಅಂಗಡಿ ಮಾಹಿತಿ ನೀಡಿದ್ದು, ಮಕ್ಕಳಿಗೆ ವೈರಲ್ ಜ್ವರ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here