ಅಡಿಲೇಡ್: ಭಾರತದ ನಾಯಕ ವಿರಾಟ್ ಕೊಹ್ಲಿ ತನ್ನ 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ನಿರಾಸೆ ಮೂಡಿಸುವ ಪ್ರದರ್ಶನ ನೀಡಿದ್ದಾರೆ.
ನಾಯಕ ಶುಭಮನ್ ಗಿಲ್ 9 ರನ್ ಗಳಿಸಿದ ಬಳಿಕ, ಮ್ಯಾಥ್ಯೂ ಬಾರ್ಟ್ಲೆಟ್ ಅವರ ಬೌಲಿಂಗ್‌ಗೆ ವಿಕೆಟ್ ನೀಡಿದರು. ನಂತರ ಬ್ಯಾಟಿಂಗ್‌ಗೆ ಬಂದು 4 ಎಸೆತ ಎದುರಿಸಿ ಎಲ್‌ಬಿಗೆ ಔಟಾದ ಕೊಹ್ಲಿ, ಭಾರತ ತಂಡಕ್ಕೆ 17 ರನ್‌ನಲ್ಲಿ ಎರಡನೇ ಅಮೂಲ್ಯ ವಿಕೆಟ್ ಕಳೆದುಕೊಂಡು ನಷ್ಟವಾಗಿದೆ.
ಅ.19 ರಂದು ಪರ್ತ್‌ನಲ್ಲಿ ನಡೆದ ಪಂದ್ಯದಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಸರಣಿಯೊಂದರಲ್ಲಿ ಕೊಹ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಇಲ್ಲಿಯವರೆಗ ಔಟ್ ಆಗಿರಲಿಲ್ಲ. ಈ ಹಿಂದೆ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಟೆಸ್ಟ್ ಮತ್ತು ಟಿ20 ಪಂದ್ಯದಲ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರು.
ಈ ಪಂದ್ಯಲ್ಲಿ ಸೊನ್ನೆ ಸುತ್ತುವ ಮೂಲಕ ಕೊಹ್ಲಿ ಏಕದಿನದಲ್ಲಿ ಒಟ್ಟು 40 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ವಿರಾಟ್ ಕೊಹ್ಲಿ ಜುಲೈ 3 ರಂದು ಐಪಿಎಲ್ ಫೈನಲ್ ಪಂದ್ಯದ ಬಳಿಕ ಯಾವುದೇ ಟೂರ್ನಿಯಲ್ಲಿ ಭಾಗವಹಿಸರಲಿಲ್ಲ.



