ಶಿವಯೋಗಮಂದಿರಕ್ಕೆ ಶ್ರೀಗಳಿಂದ ಪಾದಯಾತ್ರೆ

0
padayatre
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಶಾಖಾ ಶಿವಯೋಗಮಂದಿರ ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಲಿಂಗನಾಯಕನ ಹಳ್ಳಿಯ ಶ್ರೀ ನಿರಂಜನ ದೇವರು, ಶ್ರೀ ಚಂದ್ರಶೇಖರ ದೇವರು ಅವರ ಸಮ್ಮುಖದಲ್ಲಿ ಬಾದಾಮಿ ಬನಶಂಕರಿ ದೇವಿ ದೇವಸ್ಥಾನದಿಂದ ಲಿಂ ಶ್ರೀ ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳವರ ಪಾವನ ಕ್ಷೇತ್ರ ಶ್ರೀ ಮದ್ವೀರಶೈವ ಶಿವಯೋಗಮಂದಿರದವರೆಗೆ ದ್ವಿತೀಯ ವರ್ಷದ ಪಾದಯಾತ್ರೆ ಕೈಗೊಂಡು ಶಿವಯೋಗ ಮಂದಿರ ಗೋಶಾಲೆಯ ಜಾನುವಾರುಗಳಿಗೆ ಸದ್ಭಕ್ತರು ಸಂಗ್ರಹಸಿದ್ದ ಹೊಟ್ಟು-ಮೇವು, ಪ್ರಸಾದ ನಿಲಯಕ್ಕೆ 34 ಕ್ವಿಂಟಾಲ್ ಧವಸ-ಧಾನ್ಯಗಳನ್ನು ಹಾಗೂ ಕಾಣಿಕೆಗಳನ್ನು ತಲುಪಿಸಿದರು.

Advertisement

ಈ ಸಂದರ್ಭದಲ್ಲಿ ಹೊನ್ನಿಗನೂರ ಗ್ರಾಮದ ಗುರು-ಹಿರಿಯರು, ಮಹಿಳೆಯರು, ಯುವಕರು, ಮಕ್ಕಳು, ಭಜನಾ ಮಂಡಳಿಯ ಸದಸ್ಯರು ಶ್ರೀಗಳವರ ಜೊತೆಗೆ ಪಾದಯಾತ್ರೆ ಕೈಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here