ಬೆಂಗಳೂರು:– ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮೆಸೇಜ್ ವಿರುದ್ಧ ಧ್ವನಿ ಎತ್ತಿರುವ ನಟಿ ರಮ್ಯಾ ಪರ ದೊಡ್ಮನೆ ಕುಟುಂಬ ನಿಂತಿದೆ.
ರಮ್ಯಾಗೆ ದರ್ಶನ್ ಅಭಿಮಾನಿಗಳು ಕೊಟ್ಟ ಕಿರುಕುಳದ ವಿರುದ್ಧ ಶಿವಣ್ಣ, ಗೀತಾ ಹಾಗೂ ವಿನಯ್ ರಾಜ್‌ಕುಮಾರ್ ದನಿಯೆತ್ತಿದ್ದರು. ಇದನ್ನ ಗಮನಿಸಿದ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ವ್ಯಂಗ್ಯವಾಡಿದ್ದಾರೆ. ‘ತಮ್ಮ ಮನೆಯಲ್ಲೇ ಇದೆಲ್ಲಾ ನಡೆಯುವಾಗ ನಿದ್ದೆ ಮಾಡ್ತಿದ್ರಾ?’ ಎಂದು ದೊಡ್ಮನೆ ಕುಟುಂಬಸ್ಥರಿಗೆ ಬಹಿರಂಗವಾಗಿ ಶ್ರೀದೇವಿ ಭೈರಪ್ಪ ಪ್ರಶ್ನಿಸಿದ್ದಾರೆ. ಈಗಾಗಲೇ ದರ್ಶನ್ ಅಭಿಮಾನಿಗಳ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಟಿ ರಮ್ಯಾ ದೂರು ನೀಡಿದ್ದರು. ಆದರೆ, ಈ ಪ್ರಕರಣದಲ್ಲಿ ರಮ್ಯಾ ಪರ ನಿಂತ ನಟ ಶಿವಣ್ಣ, ವಿನಯ್ ರಾಜ್‌ಕುಮಾರ್ ವಿರುದ್ಧ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಮಹಿಳೆಯರನ್ನು ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲಾ ನಡೆಯುವಾಗ ಮಾತನಾಡದೇ ಸುಮ್ಮನೆ ಇದ್ರಲ್ಲಾ? ಅವಾಗ ನಿದ್ದೆ ಮಾಡ್ತಾ ಇದ್ರ ಎಲ್ಲಾ ಎಂದು ಶ್ರೀದೇವಿ ಪ್ರಶ್ನಿಸಿದ್ದಾರೆ. 7 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ ಯುವ ರಾಜ್‌ಕುಮಾರ್ – ಶ್ರೀದೇವಿ ಭೈರಪ್ಪ 2019ರಲ್ಲಿ ಕುಟುಂಬಸ್ಥರ ಸಮ್ಮತಿ ಪಡೆದು ಅದ್ಧೂರಿಯಾಗಿ ವಿವಾಹವಾದರು. ಆದರೆ, 2024ರಲ್ಲಿ ವಿಚ್ಛೇದನ ಕೋರಿ ಯುವ ರಾಜ್‌ಕುಮಾರ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಶ್ರೀದೇವಿ ಭೈರಪ್ಪ ವಿರುದ್ಧ ಯುವ ರಾಜ್‌ಕುಮಾರ್ ಕೆಲವು ಆರೋಪಗಳನ್ನ ಮಾಡಿದ್ದರು. ಶ್ರೀದೇವಿ ಭೈರಪ್ಪ ಸಹ ಯುವ ರಾಜ್‌ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನ ಹೊರಿಸಿದ್ದರು. ಈ ಪ್ರಕರಣ ಕೋರ್ಟ್‌ನಲ್ಲಿದೆ. ಡಾ ರಾಜ್‌ಕುಮಾರ್ ಕುಟುಂಬದಲ್ಲೇ ಇದು ಮೊದಲ ವಿಚ್ಛೇದನ ಪ್ರಕರಣವಾಗಿದ್ದು, ಅಂದು ಯುವ ರಾಜ್‌ಕುಮಾರ್ – ಶ್ರೀದೇವಿ ಭೈರಪ್ಪ ಬಗ್ಗೆ ಯಾರೂ ತುಟಿ ಎರಡು ಮಾಡಿರಲಿಲ್ಲ. ಇದೀಗ ಶ್ರೀದೇವಿ ಭೈರಪ್ಪ ದೊಡ್ಮನೆ ಕುಟುಂಬದ ಬಗ್ಗೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ.