ಬೆಂಗಳೂರು: ದರ್ಶನ್ ಅವರಿಗಿಂತ ನಾವೇ ವೀಕ್ ಆಗಿದ್ದೇವೆ. ಅವರಿಗೆ ಜ್ವರ ಇತ್ತು ಈಗ ರಿಕವರಿ ಆಗಿದ್ದಾರೆ ಎಂದು ತರುಣ್ ಸುಧೀರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಅವರಿಗಿಂತ ನಾವೇ ವೀಕ್ ಆಗಿದ್ದೇವೆ. ಅವರಿಗೆ ಜ್ವರ ಇತ್ತು ಈಗ ರಿಕವರಿ ಆಗಿದ್ದಾರೆ. ಇನ್ನೂ ನನ್ನ ಮತ್ತು ಸೋನಲ್ ವಿಚಾರ ಅವರಿಗೆ ಮೊದಲೇ ತಿಳಿದಿತ್ತು.
ದರ್ಶನ್ ಅವರೇ ನಮ್ಮ ಮದುವೆ ಡೇಟ್ ಫಿಕ್ಸ್ ಮಾಡಿದ್ದು ಎಂದಿದ್ದಾರೆ. ನನ್ನ ಸಲುವಾಗಿ ಮದುವೆ ಡೇಟ್ ಬದಲಾವಣೆ ಮಾಡೋದು ಬೇಡ ಅಂತ ಹೇಳಿದ್ದಾರೆ. ಅವರು ಏನು ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ನಮಗೂ ಇದೆ. ನಮ್ಮನ್ನು ಹೆಚ್ಚಾಗಿ ಪ್ರೀತಿಸುವವರ ಮೇಲೆಯೇ ನಮಗೆ ನಂಬಿಕೆ ಹೆಚ್ಚಾಗಿರುತ್ತದೆ ಎಂದು ತರುಣ್ ಸುಧೀರ್ ಮಾತನಾಡಿದ್ದಾರೆ.



