ಮೃತರ ಕುಟುಂಬಗಳಿಗೆ ನಷ್ಟ ಭರಿಸಲು ಆಗಲ್ಲ, ಸ್ವಲ್ಪ ಸಹಾಯ ಮಾಡಬಹುದಷ್ಟೆ; ಕೃಷ್ಣಬೈರೇಗೌಡ

0
Spread the love

ಹಾಸನ:- ಮೃತರ ಕುಟುಂಬಗಳಿಗೆ ನಷ್ಟ ಭರಿಸಲು ಆಗಲ್ಲ, ಸ್ವಲ್ಪ ಸಹಾಯ ಮಾಡಬಹುದಷ್ಟೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

Advertisement

ಹಾಸನದಲ್ಲಿ ಸಂಭವಿಸಿದ ಭೀಕರ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಅವಘಡದಲ್ಲಿ ಈವರೆಗೆ 9 ಜನ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರದ ಪರವಾಗಿ ಸಾಂತ್ವನ ಹೇಳಿದ್ದೇನೆ. ಆ ಕುಟುಂಬದ ನೋವು ಅರ್ಥ ಮಾಡಿಕೊಳ್ಳೋದು ಕಷ್ಟ. ಮೃತರ ಕುಟುಂಬಗಳಿಗೆ ನಷ್ಟ ಭರಿಸಲು ಆಗಲ್ಲ, ಹೀಗಾಗಿ ಸ್ವಲ್ಪ ಸಹಾಯದ ರೀತಿಯಲ್ಲಿ ಪರಿಹಾರ ನೀಡಿದ್ದೇವೆ. ತಲಾ 5 ಲಕ್ಷ ರೂ. ಪರಿಹಾರ ಕೊಡುವಂತೆ ಸಿಎಂ ಸೂಚಿಸಿದ್ದಾರೆ. ಅದರಂತೆ ನಾನು 5 ಲಕ್ಷ ರೂ. ಪರಿಹಾರ ಕೊಡುತ್ತಿದ್ದೇನೆ. ಇನ್ನೂ ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಅದರ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ಇನ್ನೂ ಇದು ಯಾರ ವೈಫಲ್ಯ ಎಂದು ಹೇಳೊಕ್ಕಾಗಲ್ಲ. ಹೆಚ್ಚಿನ ಭದ್ರತೆ ನೀಡಿದರೆ ಜನರ ಭಾವನೆಗಳಿಗೆ ಧಕ್ಕೆ ಎನ್ನುತ್ತೀರಾ, ಭದ್ರತೆ ಕಡಿಮೆ ಮಾಡಿದಾಗ ಏನಾದರೂ ಆದರೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎನ್ನುತ್ತೀರಾ. ಹೀಗಾಗಿ ವೈಫಲ್ಯದ ಬಗ್ಗೆ ನಾನು ಮಾತಾಡಲ್ಲ. ಈಗಾಗಲೇ ಟ್ರಕ್ ಚಾಲಕನನ್ನು ಬಂಧಿಸಿದ್ದೇವೆ. ಆತ ಇದೇ ಊರಿನವನು, ಅವನಿಗೂ ಗಾಯ ಆಗಿದೆ. ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡುವ ಮುನ್ನ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಸ್ಥಳ ಪರಿಶೀಲನೆ ಕೂಡ ಮಾಡಿದ್ದೇನೆ. ಕೆಲವು ಕುಟುಂಬಗಳ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಗಾಯಾಳುಗಳ ಆರೈಕೆ ಬಗ್ಗೆಯೂ ವಿಚಾರಿಸಿದ್ದೇನೆ. ಪೊಲೀಸರಿಗೆ ದುರಂತ ಹೇಗಾಯ್ತು ಹಾಗೂ ಡ್ರೈವರ್ ಬಗ್ಗೆ ತನಿಖೆ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here