ಬಿಗ್‌ ಬಾಸ್‌ ನಲ್ಲಿ ಗೆದ್ದ 50 ಲಕ್ಷ ಹಣ ಏನ್ ಮಾಡಿದ್ರು ಹನುಮಂತ?

0
Spread the love

ತನ್ನ ಹಾಡಿನ ಮೂಲಕವೇ ಖ್ಯಾತಿ ಘಳಿಸಿ ಸದ್ಯ ಬಿಗ್‌ ಬಾಸ್‌ ವಿನ್ನರ್‌ ಪಟ್ಟ ಗಿಟ್ಟಿಸಿಕೊಂಡಿರುವ ಹನುಮಂತ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ತನ್ನ ನೇರಾ ನೇರಾ ನಡೆ ನುಡಿಯ ಮೂಲಕವೇ ಅಭಿಮಾನಿಗಳ ಹೃದಯಗೆದ್ದ ಕುರಿಗಾಹಿ ಸಿಂಗರ್‌ ಹನುಮಂತ ಇದೀಗ ತಾವು ಬಿಗ್‌ ಬಾಸ್‌ ನಲ್ಲಿ ಗೆದ್ದ ೫೦ ಲಕ್ಷ ಹಣ ಏನು ಮಾಡಿದ್ದರು ಎಂಬುದನ್ನು ಹೇಳಿದ್ದಾರೆ.

Advertisement

ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹನುಮಂತ ಅತಿಥಿಯಾಗಿ ಆಗಮಿಸಿದ್ದರು. ನೆರೆದಿದ್ದ ಅಭಿಮಾನಿಗಳ ಮುಂದೆ ತಮ್ಮ ಶೈಲಿಯಲ್ಲಿ ‘ಕಪ್ ಗೆದ್ದೇನಬೇ ಅವ್ವ’ ಅಂತ ಹನುಮಂತ ಡೈಲಾಗ್ ಹೊಡೆದಿದ್ದಾರೆ. 5 ಕೋಟಿ ಮತ ಹಾಕಿ ಗೆಲ್ಲಿಸಿದಕ್ಕೆ ಹನುಮಂತ ಧನ್ಯವಾದ ಹೇಳಿದ್ದಾರೆ.

ನನಗೆ 5 ಕೋಟಿ ವೋಟಿಂಗ್ ಬಂದಿದೆ ಅಂತ ನನಗೆ ಗೊತ್ತಿರಲಿಲ್ಲ. ಆದರೆ ಸುದೀಪ್ ಸರ್ ಕೈ ಎತ್ತಿದಾಗಲೇ ನನಗೆ ತಿಳಿದಿದ್ದು ಎಂದಿದ್ದಾರೆ. ನಿಮ್ಮೆಲ್ಲರ ಪ್ರೀತಿ ಆರ್ಶೀವಾದ ಹೀಗೆ ಇರಲಿ, ಹೀಗೆ ನನ್ನಾ ಪ್ರೋತ್ಸಾಹಿಸಿ ಬೆಂಬಲಿಸಿ ಎಂದಿದ್ದಾರೆ. ಈ ವೇಳೆ, ಗೆದ್ದಿರೋ ಹಣ ಏನ್ಮಾಡ್ರಿ? ಎಂದು ಅಭಿಮಾನಿಯೊಬ್ಬ ಕೇಳಲಾದ ಪ್ರಶ್ನೆಗೆ ಬಿಗ್ ಬಾಸ್‌ನಿಂದ 50 ಲಕ್ಷ ರೂ. ಇನ್ನೂ ಬಂದಿಲ್ಲ. ಬರೋಕೆ ಸ್ವಲ್ಪ ತಡವಾಗುತ್ತದೆ. ಬಂದ್ಮೇಲೆ ಹೇಳ್ತೀನಿ ಅಣ್ಣ ಮನೆ ಕಡೆ ಬರಬಹುದು ಎಂದು ತಮಾಷೆಯಾಗಿ ಹನುಮಂತ ಪ್ರತಿಕ್ರಿಯಿಸಿದ್ದಾರೆ. ಇದನ್ನ ಕೇಳಿದ ಅಲ್ಲಿದ್ದ ಇತರರು ನಕ್ಕು ನಲಿದಿದ್ದಾರೆ. ಈ ಮೂಲಕ ತಮಗೆ ಬಿಗ್ ಬಾಸ್ ಕಡೆಯಿಂದ ಇನ್ನು ದುಡ್ಡು ಬಂದಿಲ್ಲ. ಬರೋದು ಇನ್ನು ತಡವಾಗುತ್ತದೆ ಅನ್ನೋದನ್ನ ಹೇಳಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here