ಇದು ಅಂಧಾಬಿಮಾನ ಅಲ್ಲದೇ ಮತ್ತೇನು? ಕೊಹ್ಲಿ ಕಟೌಟ್ ಮುಂದೆ ಮೇಕೆ ಬಲಿ ಕೊಟ್ಟ RCB ಅಭಿಮಾನಿ!

0
Spread the love

2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದು, ಪ್ಲೇ ಆಫ್ ಹೋಗೋದು ಬಹುತೇಕ ಖಚಿತವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅಪಾರ  ಅಭಿಮಾನಿಗಳನ್ನು ಹೊಂದಿರುವ ಪ್ರಾಂಚೈಸಿ ಅಂದ್ರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ.

Advertisement

17 ಸೀಸನ್ ಗಳು ಕಳೆದರೂ ಇದುವರೆಗೂ ಕಪ್ ಗೆಲ್ಲದೇ ಇದ್ರೂ ಆರ್ ಸಿಬಿ ಅಂದ್ರೆ ಅಭಿಮಾನಿಗಳಿಗೆ ಇನ್ನಿಲ್ಲದ ಕ್ರೇಜ್. ಆದ್ರೆ ಇದೇ ಅಭಿಮಾನ ಅತಿರೇಕವಾದರೆ ಕಷ್ಟ. ಎಸ್, ನಾವು ಹೀಗೆ ಯಾಕೆ ಹೇಳ್ತಿದ್ದೀವಿ ಅಂದ್ರೆ, ಮೇ 3ರ ಶನಿವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ರನ್ ಗಳಿಂದ ರೋಚಕ ಜಯ ಸಾಧಿಸಿತ್ತು. ಈ ಗೆಲುವನ್ನು ಅಭಿಮಾನಿಗಳು ಎಷ್ಟರ ಮಟ್ಟಿಗೆ ಸಂಭ್ರಮಿಸಿದರು ಅಂದ್ರೆ ಕಪ್ ಗೆದ್ದಷ್ಟೇ ಖುಷಿ ಪಟ್ಟರು.

ಆದ್ರೆ ಇಲ್ಲಿನ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಚೆನ್ನೈ ವಿರುದ್ಧ ಬೆಂಗಳೂರು ಗೆದ್ದ ಖುಷಿಯಲ್ಲಿ ಕೊಹ್ಲಿ ಬ್ಯಾನರ್ ಮುಂದೆ ಮೇಕೆ ಬಲಿಕೊಟ್ಟು ಸಂಭ್ರಮಿಸಿದ್ದಾರೆ. ಹೌದು, ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿ ಗ್ರಾಮದಲ್ಲಿ ಆರ್​ಸಿಬಿ ಅಭಿಮಾನಿಗಳು ಮಚ್ಚಿನಿಂದ ಮೇಕೆಯನ್ನು ಕಡಿದು ಕೊಹ್ಲಿ ಪೊಸ್ಟರ್​ಗೆ ರಕ್ತಾಭಿಷೇಕ ಮಾಡಿದ್ದಾರೆ. ಇದೇ ದೃಶ್ಯವನ್ನು ತಮ್ಮ ಫೋನ್​ನಲ್ಲಿ ಸೆರೆ ಮಾಡಿಕೊಂಡು call-me-143-kalki ಹೆಸರಿನ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಶಾಕ್ ಆಗಿದ್ದಾರೆ. ಅಲ್ಲದೆ ಕೇಸ್ ದಾಖಲಿಸಿ ತನಿಖೆಗೆ ಇಳಿದಿದ್ದಾರೆ.


Spread the love

LEAVE A REPLY

Please enter your comment!
Please enter your name here