ಬೆಂಗಳೂರು: ಸಾಮಾನ್ಯವಾಗಿ ಬಂಗಾರ ಹಾಗೂ ಬೆಳ್ಳಿ ದರಗಳಲ್ಲಿ ಏರಿಳಿತವಾಗುವುದು ಸಹಜವಾಗಿದ್ದು ಇದು ಹಲವು ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಕಾರಣಗಳಿಂದಾಗುತ್ತಿರುತ್ತದೆ. ಇತ್ತೀಚೆಗೆ ಕೆಲವು ರಾಷ್ಟ್ರಗಳಿಂದ ಚಿನ್ನದ ಖರೀದಿ ಹೆಚ್ಚಾಗುತ್ತಿದ್ದು ಇನ್ನೊಂದೆಡೆ ಡಾಲರ್ ದುರ್ಬಲಗೊಳ್ಳುತ್ತಿರುವುದರಿಂದಲೇ ಚಿನ್ನದ ದರ ಏರುತ್ತಿದೆ ಎನ್ನಲಾಗಿದೆ.
ಚಿನ್ನದ ಬೆಲೆ ಶುಕ್ರವಾರ 1860 ರೂಪಾಯಿ ಕಡಿಮೆ ಆಗಿತ್ತು. ಇಂದು ಮತ್ತೆ ಹೆಚ್ಚಳ ಕಂಡಿದ್ದು, ಚಿನ್ನದ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣ ಕಾಣುತ್ತಿಲ್ಲ.
ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 11 ಶನಿವಾರದಂದು, 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,426 ರೂಪಾಯಿಗೆ ತಲುಪಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ಬರೋಬ್ಬರಿ 55 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಆಗಿದ್ದು, 11,390 ರುಪಾಯಿ ಆಗಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 550 ರೂಪಾಯಿ ಹೆಚ್ಚಳ ಆಗಿ, 1,24,260 ರುಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 500 ರೂ ಏರಿಕೆ ಆಗಿ, 1,13,900 ರೂಪಾಯಿಗೆ ಏರಿಕೆ ಕಂಡಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,426 ರೂ ಇದೆ. ಬೆಳ್ಳಿಯ ಬೆಲೆ ಇಂದೂ ಕೂಡಾ 3 ರೂಪಾಯಿ ಹೆಚ್ಚಳ ಆಗಿದ್ದು ಕೆಜಿ ಬೆಲೆ 1,77,000 ರೂ ಆಗಿದೆ.