ಬೆಂಗಳೂರು:– ಹಳದಿ ಲೈನ್ ಮೆಟ್ರೋಗೆ ಇವರ ಕೊಡಗೆ ಏನು? ಎಂದು ಹೇಳುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗೆ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಈ ದೆಹಲಿಯಲ್ಲಿ ಮಾತನಾಡಿದ ಅವರು, ನಾನು ಹೊಸ ತಲೆಮಾರಿನವ, ಹಾಗಾಗಿ ಬೇಗ ಕೆಲಸ ಆಗಬೇಕು ಎನ್ನುವವನು.
ಇಂದಿರಾ ಗಾಂಧಿ ಶಂಕುಸ್ಥಾಪನೆ ಮಾಡಿ, ಸೋನಿಯಾ ಗಾಂಧಿ ಉದ್ಘಾಟನೆ ಮಾಡುವ ಸಮಯ ಮುಗಿದಿದೆ. ಇದು ಮೋದಿ ಕಾಲ, ಎಲ್ಲವೂ ವೇಗವಾಗಿ ನಡೆಯುತ್ತವೆ. ಆದರೆ ವಿಳಂಬ ಮಾಡುವುದೇ ಕಾಂಗ್ರೆಸ್ ಪಕ್ಷದವರ ಕಥೆ ಎಂದು ಸಂಸದ ತೇಜಸ್ವಿ ಸೂರ್ಯ ಡಿಸಿಎಂ ಡಿಕೆ ಶಿವಕುಮಾರ್ಗೆ ಟಾಂಗ್ ನೀಡಿದ್ದಾರೆ.
ಹಳದಿ ಲೈನ್ ಏಕೆ ಆತುರದಲ್ಲಿ ಮಾಡಿದರು ಅಂಥ ಬೈಯುತ್ತಿರುವವರು, ಇವರ ಕೊಡಗೆ ಏನು? ಸಮಸ್ಯೆಗಳು ಇದ್ದಾಗ ಎಲ್ಲಿ ಹೋಗಿದ್ದರು ಇವರು. ಮೆಟ್ರೋಗೆ ನಾಲ್ಕು ವರ್ಷ ಎಂ.ಡಿ ಇರಲಿಲ್ಲ. ಬಿಎಂಆರ್ಸಿಎಲ್ ಎರಡು ವರ್ಷದಲ್ಲಿ ಅರ್ಧ ಡಜೆನ್ ಸಮಯ ಮುಹೂರ್ತ ಫಿಕ್ಸ್ ಮಾಡಿ, ಮುಂದೂಡಿಕೆ ಮಾಡಿದೆ ಎಂದರು.
ವೇಗವಾಗಿ ಕೆಲಸ ಮಾಡುವ ಸಮಯ ಇದು. ಆಲಮಟ್ಟಿಗೆ ಶಾಸ್ತ್ರೀಯವರು ಅಡಿಗಲ್ಲು ಹಾಕಿ, ಮನಮೋಹನ್ ಸಿಂಗ್ ಉದ್ಘಾಟನೆ ಮಾಡಿದರು. ಕಾಂಗ್ರೆಸ್ನವರು ಈ ವೇಗದಲ್ಲಿ ದೇಶ ನಡೆಸಿದ್ದಾರೆ. ರಾಜ್ಯ ಸರ್ಕಾರಕ್ಕೆ ತುರ್ತು ಇಲ್ಲ. ಜಿರೋ ಟ್ರಾಫಿಕ್ನಲ್ಲಿ ಓಡಾಡುವವರಿಗೆ ಮೆಟ್ರೋ ಅವಶ್ಯಕತೆ ಬಗ್ಗೆ ಏನು ಗೊತ್ತಾಗುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.