ದರ್ಶನ್ ಬಗ್ಗೆ ಬಿಲ್ಡಪ್ ಕೊಟ್ಟಿದ್ದ ಮಾಜಿ ಖೈದಿ ಹೇಳಿದ್ದೆಲ್ಲಾ ಸುಳ್ಳಾ!? : ಸಿದ್ಧಾರೂಢಗೆ ನೋಟಿಸ್ ಕೊಟ್ಟ ಖಾಕಿ!

0
Spread the love

ಒಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಕಂಬಿ ಎಣಿಸುತ್ತಿರುವ ದರ್ಶನ್ ಒಂದು ಕಡೆ ಆದರೆ ಜೈಲಿನಲ್ಲಿ ದರ್ಶನ್ ಭೇಟಿ ಆಗಿದ್ದೀನಿ ಎಂದು ಬಿಟ್ಟಿ ಬಿಲ್ಡಪ್ ಕೊಟ್ಟಿದ್ದ ಮಾಜಿ ಖೈದಿಯೊಬ್ಬ ಇದೀಗ ಪೇಚಿಗೆ ಸಿಲುಕಿದ್ದಾನೆ. ಪರಪ್ಪನ ಅಗ್ರಹಾರ ಜೈಲಿನಲ್ಲಿಯೂ ಸಹ ವಿಶೇಷ ಸೆಲ್​ನಲ್ಲಿರುವ ದರ್ಶನ್​ಗೆ ಯಾರನ್ನೂ ಭೇಟಿ ಆಗುವ ಅವಕಾಶವಿಲ್ಲ. ಆದರೆ ಸಿದ್ಧಾರೂಢ ಎಂಬ ಮಾಜಿ ಕೈದಿ ತಾವು ದರ್ಶನ್ ಅನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದ, ಈತನಿಗೆ ಈಗ ಪೊಲೀಸ್ ಇಲಾಖೆ ನೋಟೀಸ್ ನೀಡಿದೆ.

Advertisement

ಸಿದ್ಧಾರೂಢ ಎಂಬಾತ, ಮಾಧ್ಯಮಗಳಿಗೆ, ಯೂಟ್ಯೂಬ್ ಚಾನೆಲ್​ಗಳಿಗೆ ಸಂದರ್ಶನ ನೀಡಿ, ತಾವು ದರ್ಶನ್ ಅನ್ನು ಜೈಲಿನಲ್ಲಿ ಭೇಟಿಯಾಗಿದ್ದು, ದರ್ಶನ್​ಗೆ ಯೋಗ ಹೇಳಿಕೊಟ್ಟೆ, ಧ್ಯಾನ ಹೇಳಿಕೊಟ್ಟೆ, ದರ್ಶನ್ ಜೊತೆಗೆ ಹಲವು ಸಮಯ ಮಾತನಾಡಿದೆ ಎಂದೆಲ್ಲ ಹೇಳಿಕೊಂಡಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಇದನ್ನು ಅಲ್ಲಗಳೆದಿದ್ದು, ದರ್ಶನ್ ಅನ್ನು ಸಿದ್ಧಾರೂಡ ಭೇಟಿ ಆಗಿಲ್ಲ ಎಂದಿದ್ದಾರೆ. ಇದೀಗ ಪೊಲೀಸ್ ಇಲಾಖೆಯು ಸಿದ್ಧಾರೂಢಗೆ ನೊಟೀಸ್ ಜಾರಿ ಮಾಡಿದೆ.

ಸಿದ್ಧಾರೂಢನ ಸಂದರ್ಶನಗಳನ್ನು ಗಮನಿಸಿದ್ದ ಮೇಲಾಧಿಕಾರಿಗಳು, ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ವಿಐಪಿ ಸೆಲ್​ನೊಳಗಿದ್ದ ದರ್ಶನ್ ಅನ್ನು ಭೇಟಿ ಆಗಲು ಇತರೆ ಕೈದಿಗೆ ಅವಕಾಶ ನೀಡಲಾಗಿದೆಯೇ? ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಸಿದ್ದ ಜೈಲು ಅಧಿಕಾರಿಗಳು, ದರ್ಶನ್ ಭೇಟಿಗೆ ಯಾವುದೇ ಬೇರೆ ಕೈದಿಗಳಿಗೆ ವಿಶೇಷವಾಗಿ ಜೈಲು ಸೆಲ್​ನೊಳಗೆ ಹೋಗಲು ಅವಕಾಶ ಕೊಟ್ಟಿಲ್ಲವೆಂದು ಉತ್ತರಿಸಿದ್ದಾರೆ. ಹಾಗಾಗಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿರುವ ಸಿದ್ಧಾರೂಢನಿಗೆ ಪೊಲೀಸ್ ಇಲಾಖೆ ನೊಟೀಸ್ ನೀಡಿದ್ದು, ವಿಚಾರಣೆಗೆ ಕರೆದಿದೆ

ಇದೇ ತಿಂಗಳ ಎಂಟನೇ ತಾರೀಖು ಬಳ್ಳಾರಿ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಸಿದ್ಧಾರೂಢ ಬಂದಿದ್ದ. ಆತನನ್ನು ಒಂಬತ್ತನೇ ತಾರೀಖು ಬಿಡುಗಡೆ ಮಾಡಿದ್ದೆವು. ಆತ ಇಲ್ಲಿ ದರ್ಶನ್ ಅನ್ನು ಭೇಟಿ ಆಗಿಲ್ಲ. ದರ್ಶನ್ ಸೆಲ್ ಒಳಕ್ಕೆ ಯಾರನ್ನೂ ಸಹ ಬಿಟ್ಟಿಲ್ಲ ಎಂದು ಜೈಲಧಿಕಾರಿಗಳು ಹೇಳಿದ್ದಾರೆ. ಮಾಧ್ಯಮಗಳ ಬಳಿ ಮಾತನಾಡಿದ್ದ ಸಿದ್ಧಾರೂಢ, ತಾನು ಜೈಲಿನಲ್ಲಿ ದರ್ಶನ್ ಅನ್ನು ಭೇಟಿ ಆಗಿದ್ದೆ, ಅವರಿಗೆ ಧ್ಯಾನ ಹೇಳಿಕೊಟ್ಟೆ, ಅವರು ಪುಸ್ತಕಗಳನ್ನು ಓದುತ್ತಿದ್ದಾರೆ. ನನ್ನ ಬಳಿ ಮಾತನಾಡುತ್ತಾ ರೇಣುಕಾ ಸ್ವಾಮಿ ಕುಟುಂಬದ ಬಗ್ಗೆ ಬೇಸರದಿಂದ ಮಾತನಾಡಿದರು. ಆಗಿರುವ ಘಟನೆ ಬಗ್ಗೆ ಅವರು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದೆಲ್ಲ ಹೇಳಿದರು.


Spread the love

LEAVE A REPLY

Please enter your comment!
Please enter your name here