ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆಗಿ ಹನುಮಂತ ಲಮಾಣಿ ಹೊರ ಹೊಮ್ಮಿದ್ದಾರೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಹನುಮಂತುಗೆ ಅಪಾರ ಅಭಿಮಾನಿಗಳ ಬಳಗವೇ ಹುಟ್ಟು ಕೊಂಡಿದೆ.
ಬಿಗ್ ಬಾಸ್’ ಗೆಲುವಿನ ಬಗ್ಗೆ ಮಾಧ್ಯಮದೊಂದಿಗೆ ಸಂಭ್ರಮ ಹಂಚಿಕೊಂಡಿರುವ ಹನುಮಂತ, ನನ್ನ ಗೆಲುವಿಗೆ ಕರ್ನಾಟಕದ ಜನತೆ ಕಾರಣ ಎಂದು ಖುಷಿಯಿಂದ ಮಾತನಾಡಿದ್ದಾರೆ. ಈ ವೇಳೆ, ಗೆದ್ದ 50 ಲಕ್ಷ ಏನು ಮಾಡ್ತಾರೆ ಎಂಬುದನ್ನು ವಿವರಿಸಿದ್ದಾರೆ.
ಬಿಗ್ ಬಾಸ್’ ಶೋ ಗೆದ್ದ 50 ಲಕ್ಷ ರೂ.ನಲ್ಲಿ ಮನೆ ಕಟ್ಟಿಸುತ್ತೇನೆ. ಜೊತೆಗೆ ಮದುವೆ ಆಗುತ್ತೇನೆ. ನಮಗೆ ತಗಡಿನ ಮನೆಯಿದೆ ಅದನ್ನು ತೆಗೆಯಿಸಿ, ಸ್ಲ್ಯಾಬ್ ಮನೆ ಕಟ್ಟಿಸುತ್ತೇನೆ ಎಂದು ಹನುಮಂತ ಮಾತನಾಡಿದ್ದಾರೆ.
ಬರೋದು ಬಂದು ಬಿಟ್ಟಿದ್ದೇ, ಏನಾದರೂ ಆಗಲಿ ಅಂತ ನಿಂತುಬಿಟ್ಟಿದ್ದೆ. ಬರುವಾಗ ಬಂದೇ ಖಾಲಿ, ಹೋಗುವಾಗ ಖಾಲಿ, ಇರೋ ಮಟ ಜಾಲಿ ಜಾಲಿ ಎಂದು ಸುದ್ದಿಗೋಷ್ಠಿಯಲ್ಲಿ ಹನುಮಂತ ಹಾಡಿದ್ದಾರೆ. ಈ ಮೂಲಕ ಗೆಲುವಿಗಾಗಿ ತಾವು ಯಾವುದೇ ಪ್ಲ್ಯಾನ್ ಮಾಡಿರಲಿಲ್ಲ. ನಾನು ಹೇಗೆ ಇದ್ದೆನೋ ಹಾಗೇ ಆಡಿದ್ದೇನೆ ಎಂದಿದ್ದಾರೆ.