ಬೆಂಗಳೂರು :- ಕದನ ವಿರಾಮ ಘೋಷಿಸಲು ಡೊನಾಲ್ಡ್ ಟ್ರಂಪ್ ಯಾರು? ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶದ ವಿದೇಶಾಂಗ ನೀತಿಯನ್ನು ಯಾರು ತೀರ್ಮಾನ ಮಾಡ್ತಾರೆ. ಪ್ರಧಾನಿ ಮೋದಿಯವರಾ ಅಥವಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಾ ಎಂದು ಪ್ರಶ್ನಿಸಿದರು.
ಆಪರೇಷನ್ ಸಿಂಧೂರ ಬಗ್ಗೆ ಮಾತನಾಡಿದ ನಾಯಕರನ್ನ ಪಾಕಿಸ್ತಾನಕ್ಕೆ ಕಳಿಸಬೇಕೆಂದು ಬಿಜೆಪಿ ನಾಯಕರು ಹೇಳ್ತಾರೆ. ಬಹಳ ಸ್ಪಷ್ಟವಾಗಿ ಮೊದಲ ದಿನದಿಂದಲೂ ಯಾವುದೇ ನಿರ್ಧಾರ ಇದ್ದರೂ ಸರ್ಕಾರದ ಜೊತೆ ಇದ್ದೇವೆ ಎಂದು ಹೇಳಿದ್ದೇವೆ. ಕದನ ವಿರಾಮ ನಿಮ್ಮಿಂದ ಆಗಿದ್ರೆ ಬಹಳ ಸಂತೋಷ. ಅದನ್ನ ಡೊನಾಲ್ಡ್ ಟ್ರಂಪ್ ಯಾಕೆ ಘೋಷಣೆ ಮಾಡ್ತಾರೆ. ನಿಮ್ಮ ಹೇಳಿಕೆಗೆ, ಅಮೆರಿಕ ಅಧ್ಯಕ್ಷರ ಹೇಳಿಕೆಗೆ ವ್ಯತ್ಯಾಸ ಯಾಕಿದೆ ಎಂದರು.
ನನ್ನಿಂದ ಕದನ ವಿರಾಮ ಆಗಿದೆ ಎಂದು ಏಳನೇ ಬಾರಿ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಪ್ರೆಸ್ ಸೆಕ್ರೆಟರಿ, ಟ್ರಂಪ್ ಅವರಿಗೆ ಕದನ ವಿರಾಮದ ಕ್ರೆಡಿಟ್ ಸಿಗ್ತಿಲ್ಲ ಎಂದು ಅಫಿಶಿಯಲ್ ಆಗಿ ಹಾಕ್ತಾರೆ. ನಾವು ಕೇಳಿದ್ದು, ನಮ್ಮ ವಿದೇಶಾಂಗ ನೀತಿಯ ತೀರ್ಮಾನ ತೆಗೆದುಕೊಳ್ತಿರೋದು ಯಾರು? ನರೇಂದ್ರ ಮೋದಿಯವರಾ ಅಥವಾ ಡೊನಾಲ್ಡ್ ಟ್ರಂಪ್ ಅವರಾ ಎಂದು ಕೇಳಿದರು.