ಬೋಳು ತಲೆ ಹೆಚ್ಚಾಗಿ ಪುರುಷರಿಗೆ ಯಾಕೆ? ಇಲ್ಲಿದೆ ಸ್ಟ್ರಾಂಗ್ ರೀಸನ್!

0
Spread the love

ಬೋಳು ತಲೆ ಸಮಸ್ಯೆಯು ಪುರುಷರಿಗೆ ತುಂಬಾ ಕಿರಿಕಿರಿ ಹಾಗೂ ಮುಜುಗರ ಉಂಟು ಮಾಡುವಂತಹ ಸಂಗತಿ. ಪುರುಷರಲ್ಲಿನ ಬೋಳು ತಲೆ ಸಮಸ್ಯೆಗೆ ವೈದ್ಯಕೀಯವಾಗಿ ಆಂಡ್ರೊಜೆನಿಕ್ ಅಲೋಪೆಸಿಯಾ ಎಂದು ಕರೆಯಲಾಗುತ್ತದೆ. ಬೋಳು ತಲೆ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ಡೈಹೈಡ್ರೊಟೆ ಸ್ಟೋಸ್ಟೆರಾನ್ ಎನ್ನುವ ಹಾರ್ಮೋನ್ ಸ್ರವಿಸುವಿಕೆ. ಈ ಹಾರ್ಮೋನ್ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದರಿಂದ ಪುರುಷರಲ್ಲಿ ಬೋಳು ತಲೆ ಸಮಸ್ಯೆ ಕಾಣಿಸಿಕೊಳ್ಳುವುದು.

Advertisement

ಪ್ರತಿಯೊಬ್ಬ ವ್ಯಕ್ತಿಯು ತನ್ನ ತಲೆಯ ಮೇಲೆ ಉತ್ತಮವಾಗಿ ಕೂದಲು ಇರಬೇಕೆಂದು ಭಯಸುತ್ತಾನೆ. ಕೂದಲು ನಿಮ್ಮ ಸಂಪೂರ್ಣ ಆಕಾರವನ್ನೇ ಬದಲಾಯಿಸುತ್ತದೆ. ನೀವು ಸುಂದರವಾಗಿ ಕಾಣಲು ಕೂದಲು ಸಹಕಾರಿಯಾಗಿದೆ. ಕೂದಲನ್ನು ಅಮೂಲ್ಯ ವಸ್ತುವಿನಂತೆ ಪರಿಗಣಿಸಬೇಕು. ಆದರೆ ಅದೇ ಕೂದಲು ತನ್ನಿಂತಾನೇ ಉದುರಲು ಆರಂಭಿಸಿದಾಗ ಟೆನ್ಷನ್ ಹೆಚ್ಚುತ್ತದೆ ಮತ್ತು ನಾವು ವಿವಿಧ ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸುತ್ತೇವೆ.

ಕೂದಲು ಉದುರುವುದು ನಿಲ್ಲದಿದ್ದಾಗ ಪುರುಷರಲ್ಲಿ ಬೋಳು ತಲೆ ಉಂಟಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಬೋಳು ತಲೆ ಸಮಸ್ಯೆ ಉಂಟಾಗುವುದು ಕಡಿಮೆ. ಮಹಿಳೆಯರು ಕೂದಲು ಉದುರುವಿಕೆಯಿಂದ ಅತೃಪ್ತಿ ಹೊಂದಿದ್ದರೂ ಕೂಡ ಬೋಳು ಅಪರೂಪವಾಗಿ ಕಂಡುಬರುತ್ತದೆ. ಹಾಗಾದರೆ ಪುರುಷರಿಗೆ ಮಾತ್ರ ಏಕೆ ಬೋಳು ಬರುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಬೋಳು ತಲೆಗೆ ಕಾರಣಗಳು ಹಲವಾರಿದ್ದರೂ ಕೂಡ ನಮ್ಮ ಬದಲಾದ ಜೀವನಶೈಲಿ ಮತ್ತು ಒತ್ತಡದ ದಿನಚರಿಗಳು ಈ ರೀತಿ ಸಮಸ್ಯೆಗೆ ಪ್ರಮುಖ ಕಾರಣ ಎನ್ನಬಹುದಾಗಿದೆ. ಇನ್ನು ಈ ಸಮಸ್ಯೆ ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಕಂಡುಬರುತ್ತಿದ್ದರೂ ಕೂಡ ಪುರುಷರಲ್ಲಿ ಗಮನಾರ್ಹವಾಗಿ ಈ ರೀತಿ ಪ್ರಕರಣಗಳು ಹೆಚ್ಚಾಗಿ ಕಾಣಬಹುದಾಗಿದೆ. ಇದು ವ್ಯಕ್ತಿಗೆ ಮುಜುಗರವಾಗುವಂತೆ ಮಾಡುವುದು ಮಾತ್ರವಲ್ಲ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಈ ರೀತಿ ತಲೆ ಬೋಳಾಗುವುದಕ್ಕೆ ಕಾರಣವೇನು? ಈ ತರದ ಸಮಸ್ಯೆ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರುವುದೇಕೆ? ಅದನ್ನು ಹೇಗೆ ತಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ.

ಪುರುಷರಲ್ಲಿ ಟೆಸ್ಟೋಸ್ಟೆರಾನ್ ನಿಂದ ಉತ್ಪತ್ತಿಯಾಗುವ ಡಿಎಚ್‌ಟಿ ಹಾರ್ಮೋನ್ ಕೂದಲಿನ ಬೇರುಗಳಿಗೆ ಬೇಗನೆ ಹಾನಿ ಮಾಡುತ್ತದೆ. ಮಹಿಳೆಯರಲ್ಲಿ, ಈ ಹಾರ್ಮೋನ್ ಮಟ್ಟ ಕಡಿಮೆ ಇರುವುದರಿಂದ ಅವರ ಕೂದಲು ಅಷ್ಟು ಬೇಗ ಉದುರುವುದಿಲ್ಲ. ಹೆಚ್ಚುವರಿಯಾಗಿ, ಪುರುಷರಲ್ಲಿ ಬೋಳು ಸಾಮಾನ್ಯವಾಗಿ ಹಣೆಯಿಂದ ಪ್ರಾರಂಭವಾಗಿ ತಲೆಯ ಮಧ್ಯಭಾಗಕ್ಕೆ ಹೋಗುತ್ತದೆ ಇದಕ್ಕೆ ವ್ಯತಿರಿಕ್ತವಾಗಿ, ಮಹಿಳೆಯರಲ್ಲಿ ಕೂದಲು ಉದುರುವುದು ನೆತ್ತಿ ಪೂರ್ತಿ ಕೂದಲು ಉದುರುತ್ತದೆ. ಅದಕ್ಕಾಗಿಯೇ ಮಹಿಳೆಯರಲ್ಲಿ ಅಷ್ಟು ಬೇಗ ಗಮನಕ್ಕೆ ಬರುವುದಿಲ್ಲ. ಅದಲ್ಲದೆ ಈಸ್ಟ್ರೊಜೆನ್ ಹಾರ್ಮೋನ್ ಮಹಿಳೆಯರ ಕೂದಲಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ, ಆದರೆ ಪುರುಷರಲ್ಲಿ ಡೈಹೈಡ್ರೊಟೆಸ್ಟೊಸ್ಟೆರೋನ್ ಪರಿಣಾಮ ಕೂದಲಿಗೆ ಹಾನಿಯಾಗುತ್ತದೆ. ಸಾಮಾನ್ಯವಾಗಿ 20 ವರ್ಷದ ನಂತರ ಪುರುಷರಲ್ಲಿಈ ರೀತಿ ಸಮಸ್ಯೆ ಕಂಡುಬಂದರೆ ಮಹಿಳೆಯರಲ್ಲಿ ಇದು 40 ವರ್ಷದ ನಂತರ ಸಕ್ರಿಯವಾಗುತ್ತದೆ.

ಪ್ರೋಟೀನ್, ಕಬ್ಬಿಣ, ಒಮೆಗಾ- 3 ಕೊಬ್ಬಿನಾಮ್ಲಗಳು, ವಿಟಮಿನ್ ಬಿ12 ಮತ್ತು ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಧ್ಯಾನ, ಯೋಗ ಮತ್ತು ನಿದ್ರೆ ಸರಿಯಾಗಿ ಮಾಡಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಹೇರ್ ಡೈ, ಜೆಲ್ ಮತ್ತು ಸ್ಪ್ರೇ ಬಳಸುವುದನ್ನು ತಪ್ಪಿಸಿ. ಕೂದಲು ಜಾಸ್ತಿ ಉದುರುತ್ತಿದ್ದರೆ, ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.


Spread the love

LEAVE A REPLY

Please enter your comment!
Please enter your name here