ಚಾಮರಾಜನಗರ:- ಕಾಡಾನೆಗಳ ಉಪಟಳದಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಸುತ್ತಮುತ್ತ ಜರುಗಿದೆ.
Advertisement
ಮಹದೇವಪ್ಪ ಹಾಗೂ ಬಸವರಾಜಪ್ಪ ಎಂಬ ರೈತರ ಜಮೀನುಗಳಿಗೆ ನುಗ್ಗಿದ ಕಾಡಾನೆಗಳು, ಸೋಲಾರ್ ತಂತಿಬೇಲಿಗಳನ್ನು ದ್ವಂಸ ಮಾಡಿ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿ ಬೆಳೆಗಳನ್ನು ತಿಂದು ತುಳಿದು ಹಾನಿ ಮಾಡಿವೆ.
ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ರೈತರು ಕಾಡಾನೆಗಳ ಹಾವಳಿ ತಪ್ಪಿಸಬೇಕು ಹಾಗೂ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.